ಗಂಡಸರ ಬಳಿ ಯಾವತ್ತೂ ಈ ವಿಷ್ಯ ಹೇಳ್ಬೇಡಿ ಎಂದ ಬ್ಯೂಟಿ

425

ಸ್ಯಾಂಡಲ್ ವುಡ್ ಸೇರಿದಂತೆ ಸೌಥ್ ಸಿನಿ ದುನಿಯಾದಲ್ಲಿ ಮಿಂಚುತ್ತಿರುವ ನಟಿ ಅಂದ್ರೆ, ಕನ್ನಡತಿ ಹರಿಪ್ರಿಯಾ. ಈ ನಟಿ ಸೋಷಿಯಲ್ ಮೀಡಿಯಾದಲ್ಲಿ ಸದಾ ಬ್ಯುಸಿ ಇರ್ತಾರೆ. ಒಂದಲ್ಲ ಒಂದು ಪೋಸ್ಟ್ ಹಾಕುವ ಮೂಲಕ ಅಭಿಮಾನಿಗಳಿಗೆ ಖುಷಿ ನೀಡ್ತಾರೆ. ಇದೀಗ ಹರಿಪ್ರಿಯಾ ಮತ್ತೊಂದು ಪೋಸ್ಟ್ ಮಾಡಿದ್ದಾರೆ.

ಗಂಡಸರ ಬಳಿ ಹಣ್ಮಕ್ಕಳು ಯಾವತ್ತೂ ಈ ವಿಷ್ಯ ಹೇಳ್ಬೇಡಿ ಎಂದಿದ್ದಾರೆ. ಜಿರಳೆ ಕಂಡ್ರೆ ಬಹುತೇಕ ಹುಡ್ಗಿಯರಿಗೆ ಹೆದರಿಕೆ. ಅಸಹ್ಯ ಅನಿಸುತ್ತೆ. ಹೀಗಾಗಿ ಜಿರಳೆ ಕಂಡ್ರೆ ಮಾರೂದ್ದ ದೂರ ಓಡ್ತಾರೆ. ಇದನ್ನ ಕೆಲವರು ಬಂಡವಾಳ ಮಾಡಿಕೊಂಡು ಹೆದರಿಸಲು ಬರ್ತಾರೆ. ಹೀಗಾಗಿ ಈ ಬಗ್ಗೆ ಗಂಡಸರ ಬಳಿ ಹೇಳ್ಬೇಡಿ ಎಂದಿದ್ದಾರೆ.

https://twitter.com/HariPrriya6/status/1253907977846677504?s=20

ದೊಡ್ಡ ದೊಡ್ಡ ಪ್ರಾಣಿಗಳನ್ನ ಎದುರಿಸುವ ಹೆಣ್ಮಕ್ಕಳು, ಜಿರಳೆ ಕಂಡ್ರೆ ಭಯ ಪಡ್ತಾರೆ. ಇದು ವಂಶಪಾರಂಪರ್ಯದಿಂದ ಬರುತ್ತದೆ ಎಂದು ನಂಬಿದ್ದೇನೆ. ನನ್ನ ತಾಯಿ, ಆಂಟಿಯರು ಸಹ ಜಿರಳೆ ಕಂಡ್ರೆ ಓಡುತ್ತಿದ್ದರು. ಕೆಲವು ಸಾರಿ ನನ್ನ ಸ್ನೇಹಿತರು ಜಿರಳೆ ಹಿಡಿದು ನನ್ಗೆ ಭಯಪಡಿಸಿದ್ದಾರೆ. ಇದೀಗ ನಾನೀಗ ಈ ಭಯವನ್ನ ನಿವಾರಿಸಿಕೊಂಡಿದ್ದೇನೆ. ಇದೀಗ ನಿಮ್ಮ ಸರದಿ ಎಂದು ಟ್ವೀಟ್ ಮಾಡಿದ್ದಾರೆ.




Leave a Reply

Your email address will not be published. Required fields are marked *

error: Content is protected !!