ವಿಜಯಪುರದಲ್ಲಿ ಕರೋನಾ ಸೋಂಕಿತ ವಿದ್ಯಾರ್ಥಿನಿ ಫೋಟೋ ಲೀಕ್: ಯುವಕ ಅರೆಸ್ಟ್

499

ವಿಜಯಪುರ: ನಗರದಲ್ಲಿನ ವೈದ್ಯಕೀಯ ವಿದ್ಯಾರ್ಥಿನಿಗೆ ಸೋಂಕು ದೃಢಪಟ್ಟಿದೆ. ಆ ವಿದ್ಯಾರ್ಥಿನಿಯ ಫೋಟೋವನ್ನ ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿದ್ದ ಯುವಕನನ್ನ ಬಂಧಿಸಲಾಗಿದೆ.

ವಿಜಯಪುರದ ಮಕಣಾಪುರ ತಾಂಡಾ ನಿವಾಸಿ 24 ವರ್ಷದ ಅನಿಲ ರಾಠೋಡ ಬಂಧಿತ ಆರೋಪಿಯಾಗಿದ್ದಾನೆ. ಬಿಎಲ್ ಡಿಇ ವೈದ್ಯಕೀಯ ವಿದ್ಯಾರ್ಥಿನಿಗೆ ಪಾಸಿಟಿವ್ ವೆಂದು ಫೋಟೋ ವೈರಲ್ ಮಾಡಿದ್ದ. ಕಲಂ 188, 502(2), 354(ಡಿ) ಐಪಿಸಿ ಅಡಿಯಲ್ಲಿ ಬಂಧನ ಮಾಡಲಾಗಿದೆ.

ಈ ಬಗ್ಗೆ ಆದರ್ಶ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಹೀಗಾಗಿ ಪೊಲೀಸ್ರು ಕಾರ್ಯಾಚರಣೆ ನಡೆಸಿ, ಯುವಕನನ್ನ ಬಂಧಿಸಲಾಗಿದೆ. ಈ ಬಗ್ಗೆ ವಿಜಯಪುರ ಎಸ್ಪಿ ಅನುಪಮ ಅಗರವಾಲ್ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.




Leave a Reply

Your email address will not be published. Required fields are marked *

error: Content is protected !!