ಪ್ರಜಾಸ್ತ್ರ ಸುದ್ದಿ
ಸಿಂದಗಿ: ನವೆಂಬರ್ 26ರ ಸಂವಿಧಾನ ಸಮರ್ಪಣಾ ದಿನದ ನಿಮಿತ್ತ ಪಟ್ಟಣದಲ್ಲಿ ‘ಸಂವಿಧಾನ ಅರಿವಿಗಾಗಿ ಓಟ’ ಅನ್ನೋ ಶೀರ್ಷಿಕೆ ಅಡಿಯಲ್ಲಿ ಮ್ಯಾರಾಥನ್ ಆಯೋಜಿಸಲಾಗಿದೆ.
ಪ್ಲೈಯ್ ಸ್ಪೋರ್ಟ್ಸ್ ಅಸೋಸಿಯೇಷನ್ ಹಾಗೂ ಗಣೇಶ ಕನ್ಸ್ ಸ್ಟ್ರಕ್ಷನ್ ಸಹಯೋಗದೊಂದಿಗೆ ನವೆಂಬರ್ 26, 2023ರಂದು ಮ್ಯಾರಾಥನ್ ನಡೆಸಲಾಗುತ್ತಿದೆ. ಇದರಲ್ಲಿ ಭಾಗವಹಿಸುವವರಿಗೆ ಟೀ ಶರ್ಟ್, ಅಭಿನಂದನಾ ಪತ್ರ ನೀಡಲಾಗುತ್ತೆ. ಇನ್ನು ಪ್ರಥಮ ಸ್ಥಾನ ಪಡೆದವರಿಗೆ 25 ಸಾವಿರ ರೂಪಾಯಿ, ದ್ವೀತಿಯ ಸ್ಥಾನ ಪಡೆದವರಿಗೆ 11 ಸಾವಿರ ರೂಪಾಯಿಗಳ ಬಹುಮಾನ ನೀಡಲಾಗುವುದು.

ನವೆಂಬರ್ 23, ಸಂಜೆ 5 ಗಂಟೆಯ ತನಕ ಹೆಸರು ನೋಂದಾಯಿಸಬಹುದು. ಹೆಚ್ಚಿನ ಮಾಹಿತಿಗಾಗಿ ನಿಂಗರಾಜ ಗುಡಿಮನಿ(9663995571) ಹಾಗೂ ಶಿವಾನಂದ ಆಲಮೇಲ(9901447503) ಅವರನ್ನು ಸಂಪರ್ಕಿಸಬಹುದು ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.