ವಿದ್ಯುತ್ ತಂತಿ ತುಳಿದು ತಾಯಿ, ಮಗು ಸಾವು

144

ಪ್ರಜಾಸ್ತ್ರ ಸುದ್ದಿ

ಬೆಂಗಳೂರು: ತುಂಡಾಗಿ ಬಿದ್ದಿದ್ದ ವಿದ್ಯುತ್ ತಂತಿ ತುಳಿದ ಪರಿಣಾಮ ತಾಯಿ, ಮಗಳು ಮೃತಪಟ್ಟ ಘಟನೆ ವೈಟ್ ಫೀಲ್ಡ್ ನ ಕಾಡುಗೋಡಿ ಹತ್ತಿರ ನಡೆದಿದೆ. 29 ವರ್ಷದ ಸೌಂದರ್ಯ ಹಾಗೂ ಇವರ 9 ತಿಂಗಳ ಕೂಸು ಮೃತಪಟ್ಟಿದೆ.

ಎ.ಕೆ ಗೋಪಾಲನ್ ಕಾಲೋನಿ ನಿವಾಸಿಯಾಗಿರುವ ಸೌಂದರ್ಯ, ದೀಪಾವಳಿ ಹಬ್ಬಕ್ಕೆಂದು ಚೆನ್ನೈನ ನಿವಾಸಕ್ಕೆ ಹೋಗಿ ವಾಪಸ್ ಆಗಿದ್ದರು. ಇಲ್ಲಿನ ಮನೆಗೆ ಹೋಗುತ್ತಿದ್ದಾಗ ತುಂಡಾಗಿ ರಸ್ತೆ ಮೇಲೆ ಬಿದ್ದಿದ್ದ ವಿದ್ಯುತ್ ತಂತಿ ತುಳಿದಿದ್ದಾಳೆ. ಈ ವೇಳೆ ಮಗುವನ್ನು ಹೊತ್ತುಕೊಂಡಿದ್ದರು. ಪತಿ ಇವರನ್ನು ರಕ್ಷಿಸಲು ಹೋದಾಗ ಅವರ ಕೈಗೂ ಗಾಯವಾಗಿದ್ದು ಆಸ್ಪತ್ರೆಗೆ ದಾಖಲಿಸಲಾಗಿದೆ.
Leave a Reply

Your email address will not be published. Required fields are marked *

error: Content is protected !!