ಬ್ರೇಕಿಂಗ್ ನ್ಯೂಸ್: ಪುಲ್ವಾಮಾ ಅಟ್ಯಾಕ್ ಸಂಭ್ರಮ.. ಪಾಕ್ ಪರ ಘೋಷಣೆ.. ಹುಬ್ಬಳ್ಳಿಯಲ್ಲಿ ಮೂವರು ವಶಕ್ಕೆ

393

ಹುಬ್ಬಳ್ಳಿ: ಜಮ್ಮು ಕಾಶ್ಮೀರ ಮೂಲದ ವಿದ್ಯಾರ್ಥಿಗಳಿಂದ ಪುಲ್ವಾಮಾ ಅಟ್ಯಾಕ್ ಪರ ಸಂಭ್ರಮಾಚರಣೆ ನಡೆಸಿರುವ ಪ್ರಕರಣ ಬೆಳಕಿಗೆ ಬಂದಿದೆ. ಮೂವರು ಎಂಜಿನಿಯರಿಂಗ್ ವಿದ್ಯಾರ್ಥಿಗಳು ಪಾಕಿಸ್ತಾನ ಜಿಂದಾಬಾದ್ ಎಂದು ಹೇಳಿ ಮಾಡಿರುವ ವಿಡಿಯೋ ವೈರಲ್ ಆಗಿದೆ.

ಹುಬ್ಬಳ್ಳಿಯ ಗೋಕುಲ ರಸ್ತೆಯಲ್ಲಿರುವ ಕೆಎಲ್‌ಇ ಕಾಲೇಜಿನಲ್ಲಿ ಪ್ರಥಮ ವರ್ಷದ ಸಿವಿಲ್ ಇಂಜಿನಿಯರಿಂಗ್ ಓದುತ್ತಿರುವ ಮೂವರು ವಿದ್ಯಾರ್ಥಿಗಳು, ನಿನ್ನೆ ಪುಲ್ವಾಮಾ ದಾಳಿಯ ಕರಾಳ ದಿನಾಚರಣೆ ಸಂದರ್ಭದಲ್ಲಿ ಸಂಭ್ರಮಾಚರಣೆ ಮಾಡಿದ್ದಾರೆ. ಇದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ಹುಬ್ಬಳ್ಳಿಯ ಕೊಟಗುಣಸಿಯಲ್ಲಿನ ಹಾಸ್ಟೆಲ್‌ ನಲ್ಲಿ ವಾಸ ಮಾಡ್ತಿದ್ದಾರೆ. ಗೋಕುಲ ರಸ್ತೆ ಪೊಲೀಸರಿಗೆ ಸ್ಥಳೀಯರು ದೂರು ನೀಡಿದ್ಮೇಲೆ, ಮೂವರು ವಿದ್ಯಾರ್ಥಿಗಳನ್ನ ವಶಕ್ಕೆ ಪಡೆದಿರುವ ಪೊಲೀಸ್ರು ವಿಚಾರಣೆ ನಡೆಸುತ್ತಿದ್ದಾರೆ.




Leave a Reply

Your email address will not be published. Required fields are marked *

error: Content is protected !!