ಪ್ರಜಾಸ್ತ್ರ ಕ್ರೀಡಾ ಸುದ್ದಿ
ಅರ್ಜೆಂಟೇನಿಯಾದ ಸ್ಟಾರ್ ಪುಟ್ಬಾಲ್ ಆಟಗಾರ ಲಿಯೋನೆಲ್ ಮೆಸ್ಸಿ ಮತ್ತೊಂದು ದಾಖಲೆ ಮಾಡಿದ್ದಾರೆ. ವೃತ್ತಿ ಬದುಕಿನ 700ನೇ ಗೋಲ್ ಬಾರಿಸುವ ಮೂಲಕ ಕಾಲ್ಚಂಡು ಆಟದಲ್ಲಿ ಹೊಸ ದಾಖಲೆ ಬರೆದಿದ್ದಾರೆ. ಇದು ಮೆಸ್ಸಿ ಅಭಿಮಾನಿಗಳಿಗೆ ಫುಲ್ ಖುಷಿಯಾಗಿದೆ.
ಸ್ಪಾನಿಸ್ ಲೀಗ್ ಟೂರ್ನಿಯಲ್ಲಿ ಬಾರ್ಸಿಲೋನಾ ಹಾಗೂ ಆಟ್ಲೆಟಿಕೊ ಮ್ಯಾಡ್ರಿಡ್ ವಿರುದ್ಧ ಪಂದ್ಯದಲ್ಲಿ ಗೋಲು ಬಾರಿಸುವ ಮೂಲಕ ಈ ಸಾಧನೆ ಮಾಡಿದ್ದಾರೆ. ಇದರೊಂದಿಗೆ ಕ್ರಿಸ್ಟಿನೋ ರೊನಾಲ್ಡೋ ಸಾಲಿಗೆ ಸೇರಿದ್ದಾರೆ. ಆದ್ರೆ, ಈ ಪಂದ್ಯ 2-2 ಸಮಬಲ ಸಾಧಿಸುವ ಮೂಲಕ ಡ್ರಾ ಕಂಡಿದೆ.