ಬಡವರಿಗೆ ಡಿಸಿಎಂ ನೆರವಿನ ಹಸ್ತ

483

ಅಥಣಿ: ದೇಶ್ಯಾದ್ಯಂತ ಮಹಾಮಾರಿ ಕರೋನಾ ಸೋಂಕು ಹರಡದಂತೆ ಲಾಕ್ ಡೌನ್ ಆದೇಶ ಘೋಷಣೆಯಾದ ದಿನದಿಂದ ಇಂದಿನವರಗೆ ಬಡಕುಟುಂಬಗಳು ಹಾಗೂ ಕೂಲಿ ಕಾರ್ಮಿಕರು ಈಗ ಕೆಲಸವಿಲ್ಲದೆ ಒಂದು ಹೊತ್ತಿನ ಊಟಕ್ಕೂ ಪರದಾಡುವಂತಹ ಸ್ಥಿತಿ ನಿರ್ಮಾಣವಾಗಿದೆ.

ಈ ಪರಿಸ್ಥಿತಿ ನೋಡಿದ ಅಥಣಿ ಕ್ಷೇತ್ರದವರಾದ ಡಿಸಿಎಂ ಲಕ್ಷ್ಮಣ ಸವದಿ ಅವರು ನೀಡಿರುವ 5 ಕೆಜಿ ಗೋಧಿ, 5 ಕೆಜಿ ಜೋಳ ಧಾನ್ಯವನ್ನ ಪಟ್ಟಣದ ಶಂಕರ ನಗರ, ವಿಕ್ರಮಪೂರ, ಶಾಂತಿ ನಗರ, ಬಸವ ನಗರ, ಗಸ್ತಿ ಪ್ಲಾಟ್, ಮುಲ್ಲಾ ಗಲ್ಲಿ, ಪಾಟೀಲ ಗಲ್ಲಿ, ಮರಾಠ ಗಲ್ಲಿ, ಹೂಳಿ ಕಟ್ಟಿ ಗಲ್ಲಿಗಳಲ್ಲಿ ಬರುವ ಸುಮಾರು 1,400 ಬಿಪಿಎಲ್ ಕಾರ್ಡದಾರರಿಗೆ ಹಾಗೂ ಬಡವರಿಗೆ ಉಚಿತವಾಗಿ ವಿತರಿಸಲಾಯ್ತು.

ಆಹಾರ ಧಾನ್ಯವನ್ನ ಮತ್ತು ಮಾಸ್ಕ್ ಚಿದಾನಂದ ಸವದಿ ವಿತರಿಸಿದರು. ನಂತರ ಮಾತನಾಡಿ ಅವರು, ಜಾಗತಿಕ ಮಹಾಮಾರಿ ಕರೋನಾ ವೈರಸ್‌ ಮಾನವನನ್ನ ಸಂಕಷ್ಟಕ್ಕೆ ಸಿಲುಕಿಸಿದೆ. ಇದರಿಂದ ಹಲವಾರು ಬಡ ಕುಟುಂಬಗಳಿಗೆ  ಸಂದಿಗ್ಧ ಸ್ಥಿತಿ ನಿರ್ಮಾಣವಾಗಿದೆ. ಸಾರ್ವಜನಿಕರು ಮತ್ತು ಸಂಘ ಸಂಸ್ಥೆಗಳು ಕಡು ಬಡ ಕುಟುಂಬಗಳಿಗೆ ನಿಮ್ಮಿಂದ ಸಾಧ್ಯವಾದಷ್ಟು ಸಹಾಯಮಾಡಿ ಎಂದು ಹೇಳಿದರು.

ಈ ವೇಳೆ ಸುಶೀಲಕುಮಾರ ಪತ್ತಾರ, ಶಿವುಕುಮಾರ ಸವದಿ, ಪ್ರದೀಪ ನಂದಗಾಂವ, ರಾಮನಗೌಡ ಪಾಟೀಲ, ಮಹಾಂತೇಶ ಠಕ್ಕಣ್ಣವರ, ವಿಶಾಲ ಸಗರಿ, ಪಂಚಯ್ಯ ಅಳ್ಳಿಮಟ್ಟಿ ಸೇರಿದಂತೆ ಅನೇಕರು ಭಾಗವಹಿಸಿದ್ರು.




Leave a Reply

Your email address will not be published. Required fields are marked *

error: Content is protected !!