ಮೆಡಿಕಲ್ ಶಾಪ್ ಬಿಟ್ಟು ಎಲ್ಲವೂ ಬಂದ್

441

ಮಂಡ್ಯ: ಮಂಡ್ಯ ತಾಲೂಕು ಬಸರಾಳು ಹೋಬಳಿ ಮಟ್ಟದ ಜನಸ್ಪಂದನ ಕಾರ್ಯಕ್ರಮ ಸಭೆ ನಡೆಯಿತು. ಈ ವೇಳೆ ಕೋವಿಡ್ 19ನ್ನ ಸಂಬಂಧಿಸಿದಂತೆ ಚಿಕನ್ ಮತ್ತು ಮಟನ್ ಹಾಗೂ ದಿನಸಿ ಅಂಗಡಿ ಮುಂಗಟ್ಟುಗಳಿಗೆ ಅಧಿಕಾರಿಗಳು ಎಚ್ಚರಿಕೆ ಕೊಟ್ಟಿದ್ದಾರೆ.

ಕರೋನಾಗೆ ಸಂಬಂಧಿಸಿದಂತೆ ಸಾರ್ವಜನಿಕರು, ವ್ಯಾಪಾರಸ್ಥರು ಎಚ್ಚೆತ್ತುಕೊಳ್ಳುತ್ತಿಲ್ಲ. ಜನರ ಜೀವದ ಜೊತೆ ಚೆಲ್ಲಾಟ ಆಡ್ತಿದ್ದೀರಿ. ಹೀಗಾಗಿ ಇನ್ನು ಮುಂದೆ ಮೆಡಿಕಲ್ ಶಾಪ್ ಗಳನ್ನ ಹೊರತುಪಡಿಸಿ ಯಾವುದೇ ಅಂಗಡಿ-ಮುಂಗಟ್ಟುಗಳನ್ನ ತೆರೆಯುವಂತಿಲ್ಲ ಎಂದಿದ್ದಾರೆ. ಆದರೆ ಗ್ರಾಮ ಪಂಚಾಯಿತಿ ವತಿಯಿಂದ ಲೈಸನ್ಸ್ ಪಡೆದಿರುವ ದಿನಸಿ, ಹಾಲು, ಹಣ್ಣು ಮತ್ತು ತರಕಾರಿ ಅಂಗಡಿಗಳು ಮಾತ್ರ ಬೆಳಿಗ್ಗೆ 6:00 ರಿಂದ 10ರ ತನಕ ನಿಯಮಾವಳಿ ಪ್ರಕಾರ ಮಾರಾಟ ಮಾಡಬೇಕು ಎಂದು ಸೂಚಿಸಲಾಗಿದೆ.

ಈ ನಿಬಂಧನೆಗಳನ್ನು ಉಲ್ಲಂಘಿಸಿದವರ ವಿರುದ್ಧ ಎಫ್ಐಆರ್ ದಾಖಲಿಸಲಾಗುವುದು ಎಂದು ವಾರ್ನಿಂಗ್ ಮಾಡಲಾಗಿದೆ. ಈ ವೇಳೆ ಬಸರಾಳು ಗ್ರಾಮ ಪಂಚಾಯಿತಿ ಅಧ್ಯಕ್ಷ ಮಹಾಲಿಂಗಪ್ಪ, ಬಸರಾಳು ಆರಕ್ಷಕರಾದ ಜೆ. ಜಯಗೌರಿ, ನಾಡಕಚೇರಿ ಉಪ ತಾಸಿಲ್ದಾರ್ ತಮ್ಮಯ್ಯ, ಪಿಡಿಒ ಎಚ್.ಸಿ. ಚಂದ್ರಶೇಖರ, ಆರೋಗ್ಯ ಸಹಾಯಕ ಎಚ್.ರಾಮಚಂದ್ರ, ಆರೋಗ್ಯ ಹೆಲ್ತ್ ಇನ್ಸ್ಪೆಕ್ಟರ್ ನಟರಾಜ, ಶ್ರೀಶಕ್ತಿ ಕಾರ್ಯ ನಿರ್ದೇಶಕಿ ರಮ್ಯ, ಅಂಗನವಾಡಿ ಕಾರ್ಯಕರ್ತೆ ಪ್ರಭಾವತಿ ಹಾಗೂ ಮುಂತಾದವರು ಸಭೆಗೆ ಹಾಜರಾದರು.




Leave a Reply

Your email address will not be published. Required fields are marked *

error: Content is protected !!