ಕೊಪ್ಪಳದಲ್ಲಿ ಸಿಲುಕಿಕೊಂಡವರಿಗೆ ಕೊನೆಗೂ ಮುಕ್ತಿ

760

ಅಥಣಿ: ಕೂಲಿ ಕೆಲಸಕ್ಕಾಗಿ ಊರು ಬಿಟ್ಟು ಹೋದ ಸುಮಾರು 25 ಜನ ಕಾರ್ಮಿಕರು, ಲಾಕ್ ಡೌನ್ ನಿಂದಾಗಿ ಕೊಪ್ಪಳದಲ್ಲಿ ಸಿಲುಕಿಕೊಂಡಿದ್ರು. ಹೀಗಾಗಿ ಕಳೆದೊಂದುವರೆ ತಿಂಗಳಿಂದ ಕಾರ್ಮಿಕರು ಸಾಕಷ್ಟು ಹೈರಾಣಾಗಿದ್ರು. ಇದೀಗ ಅವರು ವಾಪಸ್ ಊರಿಗೆ ಬಂದಿದ್ದಾರೆ.

ಕೊಪ್ಪಳ ಜಿಲ್ಲೆ ಕುಷ್ಟಗಿ ತಾಲೂಕಿನ ಮುದ್ದಲಗುಂದಿ ಗ್ರಾಮದಲ್ಲಿ ದ್ರಾಕ್ಷಿ ತೋಟದಲ್ಲಿ ಕೆಲಸ ಮಾಡಲು ಅಥಣಿ ತಾಲೂಕಿನ ರಡ್ಡೇರಹಟ್ಟಿ, ಮೋಳೆ, ಕನ್ನಾಳ ಗ್ರಾಮದ ಸುಮಾರು 25 ಜನ ಕಾರ್ಮಿಕರು ಮಾರ್ಚ್ 17ರಂದು ಹೋಗಿದ್ರು. ಕೆಲಸ ಮುಗಿದಿದ್ರೂ ಲಾಕ್ ಡೌನ್ ನಿಂದಾಗಿ ಅಲ್ಲಿಯೇ ಉಳಿಯುವ ಪರಿಸ್ಥಿತಿ ಬಂದಿತ್ತು. ಸರ್ಕಾರ ಕೂಲಿ ಕಾರ್ಮಿಕರು ತಮ್ಮ ಊರುಗಳಿಗೆ ತೆರಳಲು ಜಿಲ್ಲಾಧಿಕಾರಿಗಳು ಸೂಕ್ತ ವ್ಯವಸ್ಥೆ ಮಾಡಬೇಕೆಂದು ಆದೇಶ ನೀಡಿದ್ರಿಂದ, ಡಿಸಿಎಂ ಲಕ್ಷ್ಮಣ ಸವದಿ ಸ್ವಕ್ಷೇತ್ರದ ಕಾರ್ಮಿಕರ ನೆರವಿಗೆ ಬಂದಿದ್ದಾರೆ.

ಕೊಪ್ಪಳ ಜಿಲ್ಲಾಧಿಕಾರಿಗಳೊಂದಿಗೆ ಮಾತ್ನಾಡಿ ವಾಪಸ್ ಊರಿಗೆ ಕರೆಸಿಕೊಳ್ಳುವ ವ್ಯವಸ್ಥೆ ಮಾಡಿದ್ದಾರೆ. ತಕ್ಷಣ ಕಾರ್ಮಿಕರು ಇರುವ ಸ್ಥಳಕ್ಕೆ ಹೋಗಿ ಎಲ್ಲರನ್ನ ವೈದ್ಯಕಿಯ ಪರೀಕ್ಷೆ ಮಾಡಿದ ನಂತರ ಸರ್ಕಾರಿ ಬಸ್ಸನಲ್ಲಿ ಅಥಣಿ ತಾಲೂಕಿಗೆ ಕಳುಹಿಸಲಾಗಿದೆ. ಕಾರ್ಮಿಕರು ಸುರಕ್ಷಿತವಾಗಿ ತಂತಮ್ಮ ಗ್ರಾಮಕ್ಕೆ ತೆರಳಿದ್ದು, ಇದಕ್ಕೆ ಸಹಕರಿಸಿದ ಡಿಸಿಎಂ ಲಕ್ಷ್ಮಣ ಸವದಿ, ಕೊಪ್ಪಳ ಜಿಲ್ಲಾಧಿಕಾರಿ ಹಾಗೂ ಸಾರಿಗೆ ಇಲಾಖೆ ಸಿಬ್ಬಂದಿಯವರಿಗೆ ಕೃತಜ್ಞತೆ ಸಲ್ಲಿಸಿದ್ದಾರೆ.




Leave a Reply

Your email address will not be published. Required fields are marked *

error: Content is protected !!