ನಾಳೆಯಿಂದ 2 ದಿನ ಮತದಾರರ ಪಟ್ಟಿ ಪರಿಷ್ಕರಣೆ

251

ಪ್ರಜಾಸ್ತ್ರ ಸುದ್ದಿ

ಬೆಂಗಳೂರು: ನವೆಂಬರ್ 3 ಹಾಗೂ 4ರಂದು ಎರಡು ದಿನಗಳ ಕಾಲ ರಾಜ್ಯದಲ್ಲಿ ಮತದಾರರ ಪಟ್ಟಿ ಪರಿಷ್ಕರಣೆ ಕಾರ್ಯ ನಡೆಯಲಿದೆ. ಬೆಳಗ್ಗೆ 10ರಿಂದ ಸಂಜೆ 5 ಗಂಟೆಯ ತನಕ ಪರಿಷ್ಕರಣೆ ನಡೆಯಲಿದೆ. ಮತದಾರರು ಸಮೀಪದ ಮತಗಟ್ಟೆ ಅಥವ ಆನ್ಲೈನ್ ಮೂಲಕ ಕೆಲಸ ಮಾಡಬಹುದಾಗಿದೆ.

ಮತದಾರರ ಪಟ್ಟಿಯಲ್ಲಿ ನಿಮ್ಮ ಹೆಸರು ಇರುವ ಕುರಿತು ಪರಿಶೀಲನೆ, ವಿಳಾಸ ಬದಲಾವಣೆ, ತಿದ್ದುಪಡಿ, ಹೊಸ ಸೇರ್ಪಡೆ ನಡೆಯಲಿದೆ. ಮತಗಟ್ಟೆಗೆ ಹೋಗಲು ಆಗದವರು ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ. ವೆಬ್ ಸೈಟ್ ಈ ರೀತಿ ಇದೆ. https://www.nvsp.in ಮತ್ತು https://voterportal.eci.gov.in. ಹೆಸರು ತೆಗೆಯಲು ನಮೂನೆ 7ರ ಅರ್ಜಿ ಹಾಗೂ ತಿದ್ದುಪಡಿ, ಸೇರ್ಪಡೆಗೆ ನಮೂನೆ 8ರ ಅರ್ಜಿಯಲ್ಲಿ ಸಲ್ಲಿಸಬೇಕು.




Leave a Reply

Your email address will not be published. Required fields are marked *

error: Content is protected !!