ಲೋಕಸಭಾ ಚುನಾವಣೆ: ಹಿರಿಯರಿಗೆ ಮತ್ತೆ ಬಿಜೆಪಿ ಟಿಕೆಟ್?

260

ಪ್ರಜಾಸ್ತ್ರ ಸುದ್ದಿ

ಬೆಂಗಳೂರು: ಇದೀಗ ಎಲ್ಲೆಡೆ ಲೋಕಸಭಾ ಚುನಾವಣೆಯ ಸಿದ್ಧತೆ ನಡೆಯುತ್ತಿವೆ. ಅದರಲ್ಲೂ ಬಿಜೆಪಿ ವಿಧಾನಸಭೆ ಚುನಾವಣೆಯಲ್ಲಿ ಆದ ಮುಖಭಂಗಕ್ಕೆ ಲೋಕಸಭೆಯಲ್ಲಿ ಸೇಡು ತೀರಿಸಿಕೊಳ್ಳಲು ರಣತಂತ್ರ ಹೆಣಿಯುತ್ತಿದೆ. ಆದರೆ, ಈಗಿರುವ ಸಂಸದರಿಗೆ ಟಿಕೆಟ್ ಕೊಟ್ಟರೆ ಇದರಲ್ಲಿ ಎಷ್ಟು ಮಂದಿ ಗೆಲ್ಲುತ್ತಾರೆ ಅನ್ನೋ ಪ್ರಶ್ನೆ ಇದೆ.

ಕೆಲ ಮೂಲಗಳ ಪ್ರಕಾರ ಹಾಲಿ ಸಂಸದರಾಗಿರುವ ಇವರಿಗೆಲ್ಲ ಅವರವರ ಕ್ಷೇತ್ರದಿಂದಲೇ ಟಿಕೆಟ್ ನೀಡಲಾಗುತ್ತೆ ಎಂದು ಹೇಳಲಾಗುತ್ತಿದೆ. ಚಾಮರಾಜನಗರ- ಶ್ರೀನಿವಾಸ ಪ್ರಸಾದ್, ಬೆಂಗಳೂರು ಉತ್ತರ- ಡಿ.ವಿ ಸದಾನಂದಗೌಡ, ಚಿಕ್ಕಬಳ್ಳಾಪುರ-ಬಿ.ಎನ್ ಬಚ್ಚೇಗೌಡ, ತುಮಕೂರು-ಜಿಎಸ್ ಬಸವರಾಜು, ದಾವಣಗೆರೆ- ಜಿ.ಎಂ ಸಿದ್ದೇಶ್ವರ, ಬೆಳಗಾವಿ-ಮಂಗಳಾ ಅಂಗಡಿ, ಬಾಗಲಕೋಟೆ-ಪಿಸಿ ಗದ್ದೀಗೌಡರ್, ವಿಜಯಪುರ-ರಮೇಶ್ ಜಿಗಜಿಣಗಿ, ಉತ್ತರ ಕನ್ನಡ- ಅನಂತಕುಮಾರ್ ಹೆಗಡೆ,  ಕೊಪ್ಪಳ- ಕರಡಿ ಸಂಗಣ್ಣ, ಹಾವೇರಿ- ಶಿವಕುಮಾರ ಉದಾಸಿ, ಬಳ್ಳಾರಿ-ದೇವೇಂದ್ರಪ್ಪ, ಕೋಲಾರ- ಮುನಿಸ್ವಾಮಿ ಹೆಸರು ಕೇಳಿ ಬಂದಿದೆ.

ಇದರಲ್ಲಿ ಬಹುತೇಕ ಸಂಸದರಿಗೆ ವಯಸ್ಸಾಗಿದೆ. ಅಷ್ಟೊಂದು ವರ್ಚಸ್ ಸಹ ಉಳಿಸಿಕೊಂಡಿಲ್ಲ. ಮೋದಿ ಅಲೆಯಲ್ಲಿ ಗೆದ್ದು ಬಂದವರು ಬಹಳ ಮಂದಿ ಇದ್ದಾರೆ. ಆದರೆ, ಪ್ರತಿ ಬಾರಿ ಅದೆ ಟ್ರಿಕ್ಸ್ ವರ್ಕ್ ಆಗುತ್ತಾ ಅನ್ನೋ ಪ್ರಶ್ನೆ ಇದೆ. ಇದರಲ್ಲಿ ಅಂತಿಕವಾಗಿ ಯಾರಿಗೆ ಟಿಕೆಟ್ ಸಿಗುತ್ತೆ, ಯಾರು ಚುನಾವಣೆ ಕಣದಿಂದ ಹಿಂದಕ್ಕೆ ಸರಿಯುತ್ತಾರೆ ಅನ್ನೋದಕ್ಕೆ ಚುನಾವಣೆ ಹೊಸ್ತಿನಲ್ಲಿ ತಿಳಿದು ಬರಲಿದೆ.




Leave a Reply

Your email address will not be published. Required fields are marked *

error: Content is protected !!