ಬಿಜೆಪಿ 2ನೇ ಪಟ್ಟಿ ಪ್ರಕಟ.. ಕರ್ನಾಟಕದಲ್ಲಿ 20 ಮಂದಿಗೆ ಟಿಕೆಟ್

107

ಪ್ರಜಾಸ್ತ್ರ ಸುದ್ದಿ

ನವದೆಹಲಿ: ಲೋಕಸಭಾ ಚುನಾವಣೆಗೆ ಸಂಬಂಧಿಸಿದಂತೆ ಬಿಜೆಪಿ ತನ್ನ 2ನೇ ಪಟ್ಟಿಯನ್ನು ಬುಧವಾರ ಘೋಷಿಸಿದೆ. ಕರ್ನಾಟಕದ 28 ಕ್ಷೇತ್ರಗಳ ಪೈಕಿ 20 ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನು ಘೋಷಿಸಿದೆ. ಇದರಲ್ಲಿ ಕೆಲವರಿಗೆ ಕೊಕ್ ಕೊಡಲಾಗಿದೆ. ಕೆಲವರಿಗೆ ಹೊಸ ಕ್ಷೇತ್ರಗಳನ್ನು ನೀಡಲಾಗಿದೆ.

ಕೊಡುಗು-ಮೈಸೂರು ಕ್ಷೇತ್ರದಲ್ಲಿ ಪ್ರತಾಪ್ ಸಿಂಹಗೆ ಟಿಕೆಟ್ ಕೈ ತಪ್ಪಿದೆ. ಇಲ್ಲಿ ರಾಜವಂಶಸ್ಥ ಯಧುವೀರಗೆ ಟಿಕೆಟ್ ನೀಡಲಾಗಿದೆ. ಬೆಂಗಳೂರು ಉತ್ತರದಲ್ಲಿ ಸದಾನಂದಗೌಡ ಬದಲಿಗೆ ಶೋಭಾ ಕರಂದ್ಲಾಜೆಗೆ ಟಿಕೆಟ್ ನೀಡಲಾಗಿದೆ. ಇವರ ಉಡುಪಿ-ಚಿಕ್ಕಮಗಳೂರು ಕ್ಷೇತ್ರಕ್ಕೆ ಕೋಟಾ ಶ್ರೀನಿವಾಸ ಪೂಜಾರಿಗೆ ಟಿಕೆಟ್ ಸಿಕ್ಕಿದೆ.

ಹಾವರಿಯಿಂದ ಮಗನಿಗೆ ಟಿಕೆಟ್ ಬಯಸಿದ್ದ ಕೆ.ಎಸ್ ಈಶ್ವರಪ್ಪಗೆ ಹಿನ್ನಡೆಯಾಗಿದೆ. ಅಗತ್ಯಬಿದ್ದರೆ ತಾವು ಶಿವಮೊಗ್ಗದಿಂದ ಸ್ಪರ್ಧಿಸುವ ಇಂಗಿತ ವ್ಯಕ್ತಪಡಿಸಿದ್ದರು. ಆದರೆ, ಹಾಲಿ ಸಂಸದ ಬಿ.ವೈ ರಾಘವೇಂದ್ರಗೆ ಟಿಕೆಟ್ ಫಿಕ್ಸ್ ಆಗಿದೆ.

ಚಿಕ್ಕೋಡಿ-ಅಣ್ಣಾ ಸಾಹೇಬ್ ಜೊಲ್ಲೆ, ಬಾಗಲಕೋಟೆ-ಪಿ.ಸಿ ಗದ್ದಿಗೌಡರ, ವಿಜಯಪುರ-ರಮೇಶ ಜಿಗಜಿಣಗಿ, ಕಲಬುರ್ಗಿ-ಡಾ.ಉಮೇಶ್ ಜಾಧವ್, ಬೀದರ್ ಭಗವಂತ್ ಖೂಬಾ, ಕೊಪ್ಪಳ-ಬಸವರಾಜ ಕ್ಯಾವತ್ತೂರ, ಬಳ್ಳಾರಿ-ಶ್ರೀರಾಮುಲು, ಹಾವೇರಿ-ಬಸವರಾಜ್ ಬೊಮ್ಮಾಯಿ, ಧಾರವಾಡ-ಪ್ರಲ್ಹಾದ್ ಜೋಶಿ, ದಾವಣಗೆರೆ-ಗಾಯತ್ರಿ ಸಿದ್ದೇಶ್ವರ್, ಶಿವಮೊಗ್ಗ-ಬಿ.ವೈ ರಾಘವೇಂದ್ರ, ಉಡುಪಿ-ಚಿಕ್ಕಮಗಳೂರು-ಕೋಟಾ ಶ್ರೀನಿವಾಸ್ ಪೂಜಾರ, ದಕ್ಷಿಣ ಕನ್ನಡ-ಕ್ಯಾ ಬ್ರಿಜೇಶ್ ಚೌಟ್, ತುಮಕೂರು-ವಿ.ಸೋಮಣ್ಣ, ಮೈಸೂರು-ಯಧುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್, ಚಾಮರಾಜನಗರ-ಎಸ್.ಬಾಲರಾಜ್, ಬೆಂಗಳೂರು ಗ್ರಾಮಾಂತರ-ಡಾ.ಸಿ.ಎನ್ ಮಂಜುನಾಥ್, ಬೆಂಗಳೂರು ಉತ್ತರ-ಶೋಭಾ ಕರಂದ್ಲಾಜೆ, ಬೆಂಗಳೂರು ಕೇಂದ್ರ-ಪಿ.ಸಿ ಮೋಹನ್, ಬೆಂಗಳೂರು ದಕ್ಷಿಣ-ತೇಜಸ್ವಿ ಸೂರ್ಯಗೆ ಟಿಕೆಟ್ ಅಂತಿಮವಾಗಿದೆ.




Leave a Reply

Your email address will not be published. Required fields are marked *

error: Content is protected !!