ರೈಲುಗಳ ನಡುವೆ ಡಿಕ್ಕಿ: 40 ಪ್ರಯಾಣಿಕರಿಗೆ ಗಾಯ

353

ಕಟಕ್: ಲೋಕಮಾನ್ಯ ತಿಲಕ್ ಟರ್ಮಿನಸ್ ಎಕ್ಸ್ ಪ್ರೆಸ್ ಟ್ರೇನ್, ಒಡಿಶಾದ ನೆರ್ಗುಂಡಿ ರೈಲ್ವೆ ನಿಲ್ದಾಣದ ಹತ್ತಿರ ಇನ್ನೊಂದು ರೈಲಿಗೆ ಡಿಕ್ಕಿ ಹೊಡದಿದೆ. ಇದರ ಪರಿಣಾಮ 40ಕ್ಕೂ ಹೆಚ್ಚು ಪ್ರಯಾಣಿಕರು ಗಾಯಗೊಂಡಿದ್ದಾರೆ. ಇದರಲ್ಲಿ 6 ಮಂದಿ ಸ್ಥಿತಿ ಗಂಭೀರವಾಗಿದೆ.

ಮುಂಬೈ-ಭುವನೇಶ್ವರ ಲೋಕಮಾನ್ಯ ತಿಲಕ್ ಟರ್ಮಿನಸ್ ಎಕ್ಸ್ ಪ್ರೆಸ್ ಟ್ರೇನ್ ಹಾಗೂ ಸರಕು ಸಾಗಣೆ ರೈಲು ನಡುವೆ ಇಂದು ಬೆಳಗ್ಗೆ 7ಗಂಟೆಗೆ ಡಿಕ್ಕಿ ಸಂಭವಿಸಿದೆ. ಇದ್ರಿಂದಾಗಿ 8 ಬೋಗಿಗಳು ಹಳಿ ತಪ್ಪಿ ಅನಾಹುತ ನಡೆದಿದೆ. ಬೆಳಗ್ಗೆ ಸಾಕಷ್ಟು ಮಂಜು ಇದ್ದ ಕಾರಣಕ್ಕೆ ಗೂಡ್ಸ್ ರೈಲು ನಿಂತಿರುವುದು ಕಾಣಿಸಿಲ್ಲವೆಂದು ಹೇಳಲಾಗ್ತಿದೆ. ಗಾಯಾಳುಗಳನ್ನ ಸಮೀಪದ ಆಸ್ಪತ್ರೆಗೆ ಸಾಗಿಸಲಾಗಿದೆ.




Leave a Reply

Your email address will not be published. Required fields are marked *

error: Content is protected !!