ಸದ್ಗುರು ಮಾಧವಾನಂದ ಪ್ರಭುಜಿ ಸಮುದಾಯ ಭವನ ಕಾಮಗಾರಿಗೆ ಚಾಲನೆ

339

ಅಥಣಿ: ತಾಲೂಕಿನ ರಡ್ಡೇರಹಟ್ಟಿ ಗ್ರಾಮದಲ್ಲಿ ಶ್ರೀ ಗಿರಿಮಲ್ಲೇಶ್ವರ ಮಹಾರಾಜರ ಮಠದ ಆವರಣದಲ್ಲಿ ಸದ್ಗುರು ಮಾಧವಾನಂದ ಪ್ರಭುಜಿ ಸಮುದಾಯ ಭವನ ನಿರ್ಮಾಣವಾಗ್ತಿದೆ. ಭವನದ ಕಾಮಗಾರಿಗೆ ಶಾಸಕ ಮಹೇಶ  ಕುಮಟಳ್ಳಿ ಅವರು ಚಾಲನೆ ನೀಡಿದ್ರು.

ಈ ನಾಡಿಗೆ ಸದ್ಗುರು ಮಾಧವಾನಂದ ಪ್ರಭುಜಿ ಅವರ ಕೊಡುಗೆ ಅಪಾರವಾಗಿದೆ. ಧಾರ್ಮಿಕವಾಗಿ, ಶೈಕ್ಷಣಿಕವಾಗಿ ಅವರ ಸೇವೆ ಸರ್ವಕಾಲಕ್ಕೂ ಅನುಪಮವಾಗಿದೆ. ಅವರ ಹೆಸರಿನಲ್ಲಿ ನಿರ್ಮಾಣವಾಗುತ್ತಿರುವ ಈ ಸಮುದಾಯ ಭವನ ಸಮಾಜಮುಖಿ ಕಾರ್ಯಗಳಿಗೆ ಸದುಪಯೋಗವಾಗಲಿ ಎಂದು ಅಥಣಿ ಶಾಸಕ ಮಹೇಶ ಕುಮಟಳ್ಳಿ ಹೇಳಿದರು.

ಗಡಿನಾಡು ಅಭಿವೃದ್ಧಿ ಪ್ರಾಧಿಕಾರದ ಅನುದಾನದ 30 ಲಕ್ಷ ರೂಪಾಯಿಗಳ ವೆಚ್ಚದಲ್ಲಿ ಶ್ರೀ ಮಾಧವಾನಂದ ಪ್ರಭುಜಿ ಸಮುದಾಯ ಭವನ ನಿರ್ಮಾಣವಾಗ್ತಿದೆ. ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯತ ಸದಸ್ಯ ಶ್ರೀಶೈಲ ಗಸ್ತಿ, ನ್ಯಾಯವಾದಿ ಬಿ ಬಿ ಬಿಸಲಾಪೂರ, ಅಶೋಕ ಯಲಹಡಗಿ, ಪಾಂಡು ಭೋಸಲೆ, ಸದಾಶಿವ ಶಿರಗೂರ, ಮಲ್ಲಪ್ಪ ಹಂಚಿನಾಳ, ಮಹಾದೇವ ಗಲಗಲಿ, ಬಸು ಖೋತ, ನಂದೀಶ ಅರಗೋಡಿ, ಬಸಪ್ಪ ಚನ್ನಾಪುರ, ದಾನೇಶ್ವರ ಖೋತ, ಸುಭಾಸ ಬೆಳ್ಳಂಕಿ, ಅಭಿಯಂತರ ಅರುಣ ಪಾಟೀಲ, ಗುತ್ತಿಗೆದಾರ ವಿಲಾಸ ಕುಲಕರ್ಣಿ ಸೇರಿದಂತೆ ಇತರರು ಉಪಸ್ಥಿತರಿದ್ದರು.




Leave a Reply

Your email address will not be published. Required fields are marked *

error: Content is protected !!