ವಿವಿಧ ಕಾಮಗಾರಿಗಳಿಗೆ ಕುಮಟಳ್ಳಿ-ಸವದಿ ಚಾಲನೆ

280

ಅಥಣಿ: ತಾಲೂಕಿನ ವಿವಿಧ ಗ್ರಾಮಗಳ ಕೃಷಿ ಇಲಾಖೆಯ ಜಲಾಮೃತ ಯೋಜನೆಯಡಿಯಲ್ಲಿ ಒಡ್ಡು ನಿರ್ಮಾಣಕ್ಕೆ ಚಾಲನೆ ಹಾಗೂ ಕೃಷಿ ಯಾಂತ್ರೀಕರಣ ಯೋಜನೆಯಡಿ ನಿರ್ಮಾಣಗೊಂಡ ಸಮುದಾಯ ಭವನ ಕಟ್ಟಡ ಉದ್ಘಾಟನೆ ,ಶೆಡ್ ನಿರ್ಮಾಣಕ್ಕೆ ಭೂಮಿಪೂಜೆಯನ್ನ ಮಾಡಲಾಯ್ತು.

ಶಾಸಕ ಮಹೇಶ ಕುಮಟಳ್ಳಿ ಹಾಗೂ ಚಿಕ್ಕೋಡಿ ಜಿಲ್ಲಾ ಬಿಜೆಪಿ ಯುವ ಮೋರ್ಚಾ ಅಧ್ಯಕ್ಷ ಚಿದಾನಂದ ಸವದಿ  ತಾಲೂಕಿನ ತೇಲಸಂಗ ಗ್ರಾಮದಲ್ಲಿ ವಿವಿಧ ಕಾಮಗಾರಿಗಳಿಗೆ ಪೂಜೆ ನೇರವೇರಿಸಿದರು. ಈ ವೇಳೆ ಮಾತ್ನಾಡಿದ ಶಾಸಕ ಮಹೇಶ ಕುಮಟಳ್ಳಿ, ಬೆಳೆ ದರ್ಶಕ ಆ್ಯಪ್ ಮೂಲಕವೇ ಸರ್ಕಾರದ ಸವಲತ್ತುಗಳು ಅನುಷ್ಠಾನಗೊಳ್ಳುತ್ತಿರುವದರಿಂದ, ರೈತರು ಬೆಳೆದ ಬೆಳೆಯ ಮಾಹಿತಿಯ ಪಾರದರ್ಶಕವಾಗಿರಲಿದೆ ಎಂದರು. ಇನ್ನು 2 ವರ್ಷದಿಂದ ಕೆಲ ಕೂಲಿ ಕಾರ್ಮಿಕರಿಗೆ 25 ದಿನಗಳ ಕೂಲಿ ನೀಡುತ್ತಿಲ್ಲವೆಂಬ ದೂರು ಬಂದಿದೆ. 3 ದಿನಗಳಲ್ಲಿ ಅವರಿಗೆ ಕೂಲಿ ನೀಡಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು.

ಚಿದಾನಂದ ಸವದಿ ಮಾತ್ನಾಡಿ, ಕರೋನಾ ವೈರಸ್‌ ನಿಂದ ದೂರು ಉಳಿಯಲು ಸಾಮಾಜಿಕ ಅಂತರವೊಂದೆ ಮಾರ್ಗವಾಗಿದೆ ಎಂದು ಹೇಳಿದರು. ಈ ವೇಳೆ ಕೃಷಿ ಇಲಾಖಾ ಅಧಿಕಾರಿಗಳು ಹಾಗೂ ಗ್ರಾಮಸ್ಥರು ಸೇರಿದಂತೆ ಅನೇಕರು ಪಾಲ್ಗೊಂಡಿದ್ದರು.




Leave a Reply

Your email address will not be published. Required fields are marked *

error: Content is protected !!