‘ಮಹಾ’ ಗೆಲುವು ಸಿಕ್ಕಿದ್ರೂ ದೋಸ್ತಿ ಕುಸ್ತಿಯಿದೆ..

343

ಮುಂಬೈ: ಮಹಾರಾಷ್ಟ್ರ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ-ಶಿವಸೇನ ಮೈತ್ರಿ ಪಡೆಗೆ ಗೆಲುವಾಗಿದೆ. ಹೀಗಿದ್ರೂ ಸರ್ಕಾರ ರಚನೆ ಮಾಡುವುದು ಅಷ್ಟೊಂದು ಸರಳವಾಗಿಲ್ಲ. ಯಾಕಂದ್ರೆ, ಬಿಜೆಪಿ ಹಾಗೂ ಶಿವಸೇನ ನಡುವೆ ಒಂದಿಷ್ಟು ಲೆಕ್ಕಾಚಾರದ ಕುಸ್ತಿ ನಡೆದಿದೆ.

ಕಳೆದ ಬಾರಿ 122 ಸ್ಥಾನಗಳನ್ನ ಗೆದ್ದಿದ್ದ ಬಿಜೆಪಿ ಈ ಬಾರಿ 105ಕ್ಕೆ ಬಂದಿದೆ. ಅಂದ್ರೆ 17 ಸ್ಥಾನಗಳಲ್ಲಿ ಸೋಲಾಗಿದೆ. ಇದು ಶಿವಸೇನ ಬಿಜೆಪಿಯನ್ನ ಕಟ್ಟಿ ಹಾಕಲು ಅನುಕೂಲ ಮಾಡಿಕೊಟ್ಟಿದೆ. ಹೀಗಾಗಿ ಅಧಿಕಾರವಿದೆ ಎಂದು ಅಂಹಕಾರ ತೋರಿಸಿದ್ರೆ ಜನ ಉತ್ತರ ಕೊಡ್ತಾರೆ ಅಂತಾ ಹೇಳಿದೆ.

Image result for maharashtra election result

ಶಿವಸೇನೆ 56ರಲ್ಲಿ ಗೆಲುವು ದಾಖಲಿಸಿದೆ. ಕಾಂಗ್ರೆಸ್ ಹಾಗೂ ಎನ್ ಸಿಪಿ ಮೈತ್ರಿಗೆ 98 ಸ್ಥಾನಗಳು ಬಂದಿವೆ. 29 ಕ್ಷೇತ್ರಗಳಲ್ಲಿ ಪಕ್ಷೇತರರು ಶಾಸಕರಾಗಿದ್ದಾರೆ. ಹೀಗಾಗಿ ಬಿಜೆಪಿ-ಶಿವಸೇನ ಸೇರಿಕೊಂಡು ಸರ್ಕಾರ ರಚನೆ ಮಾಡಲು ಮೊದ್ಲಿನಿಂದಲೂ ಪ್ಲಾನ್ ಮಾಡಿದ್ರೂ ಇದೀಗ ಮತ್ತೊಂದಿಷ್ಟು ಡಿಮ್ಯಾಂಡ್ಸ್ ಸೇರಿಕೊಂಡಿವೆ. ಶಿವಸೇನ ಮುಖ್ಯಸ್ಥ ಉದ್ಭವ ಠಾಕ್ರೆ ಮಗ ಆದಿತ್ಯ ಠಾಕ್ರೆಯನ್ನ ಭವಿಷ್ಯದ ಸಿಎಂ ಎಂದು ಬಿಂಬಿಸುವಂತೆ ಒತ್ತಾಯ ಮಾಡಿದೆ. ಬಿಜೆಪಿ ಇದಕ್ಕೆ ಎಷ್ಟೊಂದು ಸ್ಪಂದಿಸುತ್ತೆ ಅನ್ನೋದು ಸದ್ಯದ ಪ್ರಶ್ನೆ.




Leave a Reply

Your email address will not be published. Required fields are marked *

error: Content is protected !!