‘ಅದಾನಿ ಪ್ರಧಾನಿಯ ಪವಿತ್ರ ಹಸು’

275

ಪ್ರಜಾಸ್ತ್ರ ಸುದ್ದಿ

ಮುಂಬೈ: ಫೆಬ್ರವರಿ 14ರ ಪ್ರೇಮಿಗಳ ದಿನವನ್ನು ಗೋವಿನ ಅಪ್ಪುಗೆಯ ದಿನ ಎಂದು ಮಾಡಲು ಹೊರಟಿರುವ ಬಿಜೆಪಿ ಹಾಗೂ ಬಲಪಂಥೀಯ ವಿಚಾರಧಾರೆಗಳ ಸಂಘಟನೆಗಳ ಕ್ರಮವನ್ನು ಮಹಾರಾಷ್ಟ್ರ ಮಾಜಿ ಸಿಎಂ ಹಾಗೂ ಠಾಕ್ರೆ ಬಣ್ಣದ ಶಿವಸೇನೆಯ ಮುಖವಾಣಿ ಸಾಮ್ನಾ ಪತ್ರಿಕೆಯ ಸಂಪಾದಕೀಯದಲ್ಲಿ ಖಂಡಿಸಿದ್ದು, ಪ್ರಧಾನಿ ಮೋದಿಗೆ ಅದಾನಿ ಪವಿತ್ರ ಹಸು ಎಂದು ವ್ಯಂಗ್ಯವಾಡಿದೆ.

ಜನರು ಅದಾನಿಯ ಹಗರಣದ ಬಗ್ಗೆ ಸ್ಪಷ್ಟೀಕರಣ ಕೇಳುತ್ತಿದ್ದಾರೆ. ಆದರೆ, ಮೋದಿ ಸರ್ಕಾರ ಜನರನ್ನು ಸುಮ್ಮನಿರಿಸಲು ಧರ್ಮದ ಪ್ರಮಾಣ ನೀಡಿದೆ. ಸಂಸತ್ತಿನಲ್ಲಿ ಅದಾನಿ ಬಗ್ಗೆ ಮಾತನಾಡಲಿಲ್ಲ. ಗೋವಿನ ಬಗ್ಗೆ ಮಾತನಾಡಿದ್ದಾರೆ ಎಂದು ಸಾಮ್ನಾದ ಸಂಪಾದಕೀಯದಲ್ಲಿ ಬರೆಯಲಾಗಿದೆ.

ಫೆಬ್ರವರಿ 14ಕ್ಕೆ ವಿಶ್ವದ ತುಂಬಾ ಪ್ರೇಮಿಗಳ ದಿನ ಆಚರಿಸಲಾಗುತ್ತೆ. ಇದನ್ನು ವಿರೋಧಿಸಿರುವ ಬಿಜೆಪಿ ನಾಯಕರು ಗೋವಿನ ಅಪ್ಪುಗೆ ದಿನ ಎಂದು ಆಚರಿಸಲು ಹೊರಟಿದ್ದಾರೆ. ಇದಕ್ಕೆ ಹಿಂದೂ ಸಂಘಟನೆಗಳು ಬೆಂಬಲಿಸಿದ್ದು, ಇದಕ್ಕೆ ಸಾಕಷ್ಟು ವಿರೋಧ ವ್ಯಕ್ತವಾಗುತ್ತಿವೆ. ಸೋಷಿಯಲ್ ಮೀಡಿಯಾದಲ್ಲಿ ಮೀಮ್ಸ್ ಗಳು ಹರಿದಾಡುತ್ತಿವೆ.




Leave a Reply

Your email address will not be published. Required fields are marked *

error: Content is protected !!