ನವದೆಹಲಿ: ಈಗಾಗ್ಲೇ ಶ್ರಮಿಕ್ ವಿಶೇಷ ರೈಲು ಸಂಚಾರ ನಡೆಸಿದೆ. ಮೇ 12 ರಿಂದ ದೇಶದ 15 ನಗರಗಳಿಗೆ ವಿಶೇಷ ರೈಲು ಸಂಚರಿಸುತ್ತಿದೆ. ಇದೀಗ ವಿಶೇಷ ಎಸಿ ಟ್ರೇನ್ ಸಂಚಾರಕ್ಕೆ ಅನುಮತಿ ನೀಡಲಾಗಿದೆ ಎಂದು ಹೇಳಲಾಗ್ತಿದೆ.
ಮೇ 22ರಿಂದ ಟ್ರೇನ್ ನಲ್ಲಿ ವೇಟ್ ಲಿಸ್ಟ್ ಮಾಡಿದ ಪ್ರಯಾಣಿಕರಿಗೆ ಸಂಚರಿಸಲು ಅನುಮತಿ ನೀಡಲಾಗಿದ್ದು, ಇದಕ್ಕಾಗಿ ಟಿಕೆಟ್ ನೀಡಲಾಗುವುದು ಎಂದು ತಿಳಿಸಲಾಗಿದೆ ಎನ್ನಲಾಗ್ತಿದೆ. ಇದರ ಜೊತೆಗೆ ಬರೀ ನಗರವಲ್ಲದೆ ಪಟ್ಟಣಗಳಿಗೂ ಟ್ರೇನ್ ಸಂಚರಿಸುವ ಕುರಿತು ಚರ್ಚಿಸಲಾಗ್ತಿದೆ ಅನ್ನೋದು ತಿಳಿದು ಬಂದಿದೆ.