‘ಮಹಾ’ ಫೈಟ್.. ‘ಕೈ’ ಲಿಸ್ಟ್ ಇಂದು ರಿಲೀಸ್

400

ಮುಂಬೈ: ಮುಂಬರುವ ಮಹಾರಾಷ್ಟ್ರ ವಿಧಾನಸಭಾ ಚುನಾವಣೆಗೆ ಕಾಂಗ್ರೆಸ್ ರೆಡಿಯಾಗಿದ್ದು, ಇಂದು ತನ್ನ ಅಭ್ಯರ್ಥಿಗಳ ಪಟ್ಟಿಯನ್ನ ರಿಲೀಸ್ ಮಾಡ್ತಿದೆ. 288 ವಿಧಾನಸಭಾ ಕ್ಷೇತ್ರಗಳ ಪೈಕಿ ಮೊದಲ ಹಂತವಾಗಿ 104 ಕ್ಷೇತ್ರಗಳ ಪಟ್ಟಿಯನ್ನ ಬಿಡುಗಡೆ ಮಾಡ್ತಿದೆ.

ಕಾಂಗ್ರೆಸ್ ಮತ್ತು ನ್ಯಾಷಲಿಸ್ಟ್ ಕಾಂಗ್ರೆಸ್ ಪಾರ್ಟಿ ಸೇರಿಕೊಂಡು ತಲಾ 125 ಕ್ಷೇತ್ರಗಳಲ್ಲಿ ಸ್ಪರ್ಧಿಸ್ತಿವೆ. 38 ಕ್ಷೇತ್ರಗಳಲ್ಲಿ ಸಮಾಜವಾದಿ ಪಾರ್ಟಿ, ಉಳಿದ ಕಡೆ ಸ್ವಾಭಿಮಾನಿ ಶೇಟ್ಕರಿ ಸಂಘಟನೆ ಹಾಗೂ ಕಮ್ಯೂನಿಸ್ಟ್ ಪಕ್ಷಗಳು ಸ್ಪರ್ಧಿಸ್ತಿವೆ. ಇದರ ನಡುವೆ ಪ್ರಕಾಶ ಅಂಬೇಡ್ಕರ್ ಅವರ ‘ವಂಚಿತ ಬಹುಜನ ಅಗಾಡಿ’ ಜೊತೆಗಿನ ಮೈತ್ರಿ ಬಗ್ಗೆ ಕಾಂಗ್ರೆಸ್ ತಳ್ಳಿ ಹಾಕಿದೆ. ಎನ್ ಸಿಪಿ ಜೊತೆಗೆ ಮೈತ್ರಿಯನ್ನ ಮುರಿಯಲು ಸಾಧ್ಯವಿಲ್ಲದ ಕಾರಣ ಕಾಂಗ್ರೆಸ್ ವಿಬಿಎ ಜೊತೆ ಸೇರಿಕೊಂಡಿಲ್ಲ.

ಬಿಜೆಪಿ ಮತ್ತು ಶಿವಸೇನ ತನ್ನ ಅಭ್ಯರ್ಥಿಗಳನ್ನ ಘೋಷಣೆ ಮಾಡಬೇಕಿದೆ. 288 ಸದಸ್ಯ ಬಲದಲ್ಲಿ ಸದ್ಯ ಬಿಜೆಪಿ 122, ಶಿವಸೇನ 63, ಕಾಂಗ್ರೆಸ್ 42, ಎನ್ ಸಿಪಿ 41 ಶಾಸಕರನ್ನ ಹೊಂದಿವೆ.




Leave a Reply

Your email address will not be published. Required fields are marked *

error: Content is protected !!