‘ಮಹಾ’ನಾಟಕಕ್ಕೆ ಡೆಡ್ ಲೈನ್ ಕೊಡುತ್ತಾ ಸುಪ್ರೀಂ?

532

ಮುಂಬೈ: ಮಹಾರಾಷ್ಟ್ರದಲ್ಲಿನ ರಾಜಕೀಯ ಬೆಳವಣಿಗೆಗಳು ದೇಶದ ಗಮನವನ್ನ ಸೆಳೆದಿದೆ. ಮಹಾ ನೆಲದಲ್ಲಿನ ರಾಜಕೀಯ ಬಿಕ್ಕಟ್ಟು ಕ್ಷಣ ಕ್ಷಣವೂ ಕುತೂಹಲ ಮೂಡಿಸ್ತಿದೆ. ಇದಕ್ಕೆ ಸುಪ್ರಿಂ ಕೋರ್ಟ್ ಇಂದು ಡೆಡ್ ಲೈನ್ ಕೊಡುತ್ತಾ ಅನ್ನೋ ಪ್ರಶ್ನೆ ಮೂಡಿದೆ.

ಈಗಾಗ್ಲೇ ಬಿಜೆಪಿ ಹಾಗೂ ಎನ್ ಸಿಪಿಯ ಅಜಿತ ಪವಾರ ಟೀಂ ಸರ್ಕಾರ ರಚನೆ ಮಾಡಿದೆ. ಇದಕ್ಕೆ ಶಿವಸೇನೆ, ಎನ್ ಸಿಎಪಿ ಮುಖ್ಯಸ್ಥ ಶರದ್ ಪವಾರ ಹಾಗೂ ಕಾಂಗ್ರೆಸ್ ಆಕ್ಷೇಪ ವ್ಯಕ್ತಪಡಿಸಿದೆ. ಅಲ್ದೇ, ಅವರಿಗೆ ಬಹುಮತ ಸಾಬೀತಿಗೆ ಗಡುವು ನೀಡಬೇಕೆಂದು ಕೇಳಿಕೊಂಡಿದೆ. ಈ ಅರ್ಜಿಯ ವಿಚಾರಣೆ ಇಂದು ಬೆಳಗ್ಗೆ 10.30ಕ್ಕೆ ನಡೆಯಲಿದೆ.

ಭಾನುವಾರ ವಿಶೇಷ ವಿಚಾರಣೆ ನಡೆಸಿದ್ದ ಸುಪ್ರೀಂ ಕೋರ್ಟ್ ನ ನ್ಯಾಯಮೂರ್ತಿ ಎನ್.ವಿ ರಮಣ, ಅಶೋಕ ಭೂಷಣ ಹಾಗೂ ಸಂಜೀವ ಖನ್ನಾ ಅವರನ್ನೊಳಗೊಂಡ ಪೀಠ ಇಂದು ಬೆಳಗ್ಗೆ 10.30ಕ್ಕೆ ಮುಂದೂಡಿತ್ತು. ಈಗಾಗ್ಲೇ ಸರ್ಕಾರ ರಚನೆ ಮಾಡಿರುವ ಟೀಂಗೆ ಯಾವಾಗ ವಿಶ್ವಾಸಮತ ಯಾಚನೆ ಮಾಡಬೇಕು ಅನ್ನೋ ಗಡುವು ನೀಡಬಹುದು ಅನ್ನೋ ಕುತೂಹಲ ಮೂಡಿದೆ.




Leave a Reply

Your email address will not be published. Required fields are marked *

error: Content is protected !!