ಭಾರತ-ಚೀನಾ ನಡುವೆ ಹೊಸ ಯುಗ: ಮೋದಿ

346

ಚೆನ್ನೈ: ಪ್ರಧಾನಿ ಮೋದಿ ಹಾಗೂ ಚೀನಾ ಅಧ್ಯಕ್ಷ ಕ್ಸಿ ಜಿನ್ ಪಿಂಗ್ ನಡುವೆ ಪ್ರಮುಖ ವಿಷಯಗಳ ಕುರಿತು ಮಾತುಕತೆ ನಡೆದಿವೆ. ಈ ವೇಳೆ ಮಾತ್ನಾಡಿರುವ ಪ್ರಧಾನಿ ಮೋದಿ, ವುಹಾನ್ ಶೃಂಗಸಭೆ ಎರಡು ರಾಷ್ಟ್ರಗಳ ನಡುವೆ ವೇಗ, ನಂಬಿಕೆ ಹಟ್ಟು ಹಾಕಿತ್ತು. ಚೆನ್ನೈ ಭಾರತ ಹಾಗೂ ಚೀನಾ ನಡುವೆ ಹೊಸ ಯುಗ ಆರಂಭಿಸಿದೆ ಅಂತಾ ಹೇಳಿದ್ದಾರೆ.

ಇನ್ನು ಚೀನಾ ಅಧ್ಯಕ್ಷರು ಮಾತ್ನಾಡಿ, ನೀವು ಹೇಳಿದಂತೆ ಸ್ನೇಹಪೂರ್ವಕವಾಗಿ ದ್ವಿಪಕ್ಷೀಯ ಮಾತುಕತೆಯಲ್ಲಿ ತೊಡಗಿದ್ದೇವೆ. ನಿಮ್ಮ ಆತಿಥ್ಯವನ್ನ ಬಹಳ ಸಂತೋಷದಿಂದ ಸ್ವೀಕರಿಸಿದ್ದೇವೆ. ಇದು ನಮ್ಗೆ ಮರೆಯಲಾಗದ ಅನುಭವ ಅಂತಾ ಕ್ಸಿ ಜಿನ್ ಪಿಂಗ್ ಹೇಳಿದ್ದಾರೆ.

ಅನೌಪಚಾರಿಕ ಸಭೆ

ಅನೌಪಚಾರಿಕ ಸಭೆಯ ವೇಳೆ ಗಡಿ ಭದ್ರತೆ, ವ್ಯಾಪಾರ, ಭಯೋತ್ಪಾದನೆ ಹಾಗೂ ಸಾಂಸ್ಕೃತಿಕ ವಿಚಾರಗಳ ಬಗ್ಗೆ ಚರ್ಚೆ ನಡೆಸಿದ್ದಾರೆ. ಈ ವೇಳೆ ವಿದೇಶಾಂಗ ಸಚಿವ ಜೈಶಂಕರ, ಎನ್ಎಸ್ಎ ಅಜಿತ ದೊವಲ್, ವಿದೇಶಾಂಗ ಕಾರ್ಯದರ್ಶಿ ವಿಜಯ ಗೊಖಲೆ ಸಾಥ್ ನೀಡಿದ್ರು.

ಸಭೆಗೂ ಮೊದ್ಲು ಕೊಲಂನಲ್ಲಿರುವ ತಾಜ್ ಫಿಶರ್ ಮನ್ ಕೇವ್ ಹೋಟೆಲ್ ನಲ್ಲಿ ಕೈಯಿಂದ ನೇಯ್ದ ವಸ್ತ್ರಗಳು ಸೇರಿದಂತೆ ಸ್ಥಳೀಯ ವಿಶೇಷ ವಸ್ತುಗಳ ಪ್ರದರ್ಶನವನ್ನ ನೋಡಿದ್ರು.




Leave a Reply

Your email address will not be published. Required fields are marked *

error: Content is protected !!