ಮ್ಯಾಟ್ರಿಮೋನಿ ಮಾನಿನಿ ನಂಬಿ ಕಳೆದುಕೊಂಡ 6 ಲಕ್ಷ ರೂಪಾಯಿ

310

ಪ್ರಜಾಸ್ತ್ರ ಅಪರಾಧ ಸುದ್ದಿ

ಹಾಸನ: ಹೆಣ್ಣು, ಆಕೆ ಫೋಟೋ, ಧ್ವನಿ ಕೇಳಿದ್ರೆ ಸಾಕು ಕೆಲ ಗಂಡ್ಮಕ್ಕಳು ನಂಬಿ ಇದ್ದಿದ್ದು ಇಲ್ಲದ್ದು ಕಳೆದುಕೊಂಡು ಬಿಡ್ತಾರೆ. ಇಲ್ಲೊಬ್ಬ ಮ್ಯಾಟ್ರಿಮೋನಿಯಲ್ಲಿನ ಮಾನಿನಿಯ ಮೋಹದ ಜಾಲಕ್ಕೆ ಬಿದ್ದು 6 ಲಕ್ಷ ರೂಪಾಯಿ ಕಳೆದುಕೊಂಡಿದ್ದಾನೆ.

40 ವರ್ಷದ ಪರಮೇಶ ಎಂಬಾತ, ಮ್ಯಾಟ್ರಿಮೋನಿಯಲ್ಲಿ ಪರಿಚಯವಾದ 32 ವರ್ಷದ ಲಕ್ಷ್ಮಿ ಎಂಬಾಕೆಯನ್ನ ನಂಬಿ 2019-20ರ ನಡುವೆ ಬರೋಬ್ಬರಿ 6 ಲಕ್ಷ ರೂಪಾಯಿ ಕಳೆದುಕೊಂಡಿದ್ದಾನೆ. ಹೀಗೆ ಹಣ ಪಡೆದ ಸುಂದರಿ, ಪರಮೇಶಗೆ ಆವಾಜ್ ಹಾಕಿ ಫೋನ್ ಮಾಡಿದ್ರೆ ಅತ್ಯಾಚಾರದ ಕೇಸ್ ಹಾಕುತ್ತೇನೆ ಎಂದಿದ್ದಾಳೆ.

ಇತ್ತ ಮೋಸ ಹೋದ ಪರಮೇಶ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾನೆ. ಬಳಿಕ ಪೊಲೀಸ್ರು ಬೀಸಿದ ಬಲೆಗೆ ಲಕ್ಷ್ಮಿ ಹಾಗೂ ಈಕೆಗೆ ಸಹಾಯ ಮಾಡ್ತಿದ್ದ ಶಿವಣ್ಣ ಎಂಬಾತ ಸಿಕ್ಕಿಬಿದ್ದಿದ್ದಾನೆ. ಇದೀಗ ಇವರಿಬ್ಬರ ವಿಚಾರಣೆ ನಡೆಯುತ್ತಿದೆ. ಮದುವೆ, ಲೀವಿಂಗ್ ಟು ಗೆದರ್, ಮತ್ತೊಂದು ಮಗದೊಂದಕ್ಕಾಗಿ ವಧು-ವರ ವೆಬ್ ಸೈಟ್ ಗಳಲ್ಲಿನ ಬ್ಯೂಟಿಗಳನ್ನ ನಂಬಿ ಮೋಸ ಹೋಗುವ ಮೊದ್ಲು ಎಚ್ಚರಿಕೆಯಿಂದರಿ.




Leave a Reply

Your email address will not be published. Required fields are marked *

error: Content is protected !!