ಭಾರತೀಯ ಬ್ಯೂಟಿಗೆ ಮ್ಯಾಕ್ಸ್ ಬೋಲ್ಡ್

503

ಆಸ್ಟ್ರೇಲಿಯಾದ ಸ್ಫೋಟಕ ಆಟಗಾರ ಗ್ರೇನ್ ಮ್ಯಾಕ್ಸ್ ವೆಲ್, ಭಾರತೀಯ ಬ್ಯೂಟಿಗೆ ಮನಸೋತಿದ್ದಾನೆ. ಕೃಷ್ಣಸುಂದರಿಯನ್ನ ಇಷ್ಟಪಟ್ಟಿರುವ ಆಲ್ ರೌಂಡರ್ ಆಟಗಾರ ಮ್ಯಾಕ್ಸ್ ವೆಲ್, ಇದೀಗ ಅವಳೊಂದಿಗೆ ಸುತ್ತಾಡ್ತಿದ್ದಾನೆ. ಈ ಮೂಲಕ ವರ್ಲ್ಡ್ ಕಪ್ ಬ್ಯುಸಿ ನಡೆವೆಯೂ ಈ ಜೋಡಿ ಪ್ರೇಮಲೋಕದಲ್ಲಿ ತೇಲಾಡ್ತಿದೆ.

ಅಷ್ಟಕ್ಕೂ ಮ್ಯಾಕ್ಸ್ ವೆಲ್ ಪ್ರೀತಿಯ ಬಲೆಯಲ್ಲಿ ಬಿದ್ದಿರೋದು ವಿನಿ ರಾಮನ್ ಅನ್ನೋ ಬ್ಯೂಟಿಗೆ. ಈ ಚೆಲುವೆ ಭಾರತೀಯ ಮೂಲದವಳಾಗಿದ್ದಾಳೆ. ಆಸ್ಟ್ರೇಲಿಯಾದ ಮೆಲ್ಬೋರ್ನ್ ನಲ್ಲಿ ನೆಲೆಸಿರುವ ವಿನಿ ರಾಮನ್, ಫಾರ್ಮಾಸಿಸ್ಟ್ ಆಗಿದ್ದಾಳೆ. ಈ ಬ್ಯೂಟಿ ಜೊತೆ ಮ್ಯಾಕ್ಸ್ ಇದೀಗ ಡೇಟಿಂಗ್ ನಡೆಸಿದ್ದಾನೆ.

2017ರಲ್ಲಿ ಮೊದಲ ಬಾರಿಗೆ ಮೀಟ್ ಆದ ಜೋಡಿ ಲವ್ವಲ್ಲಿ ಬಿದ್ದಿದೆ. ಹೀಗಾಗಿ ಹೋದಲ್ಲಿ ಬಂದಲ್ಲಿ ಇವರಿಬ್ಬರು ಒಟ್ಟಿಗೆ ಕಾಣಿಸಿಕೊಳ್ತಿದ್ದಾರೆ. ಇತ್ತೀಚೆಗೆ 2019ರ ಆಸ್ಟ್ರೇಲಿಯನ್ ಕ್ರಿಕೆಟ್ ಅವಾರ್ಡ್ ಕಾರ್ಯಕ್ರಮಕ್ಕೂ ಕರೆದುಕೊಂಡು ಬಂದ್ದಿದ್ದ. ಬಳಿಕ ತಮ್ಮಿಬ್ಬರ ಫೋಟೋವನ್ನ ಇನ್ಸಾಟಾಗ್ರಾಮ್ ನಲ್ಲಿ ಹಾಕಿ ಬೆಟರ್ ಹಾಫ್ ಅಂತಾ ಬರೆದುಕೊಂಡಿದ್ದ. ಈ ಮೂಲಕ ಕ್ರಿಕೆಟ್ ಪ್ಲೇಯರ್ ಪಕ್ಕಾ ಲವರ್ ಬಾಯ್ ತರ ಫೋಟೋಗಳನ್ನ ಅಪ್ ಲೋಡ್ ಮಾಡ್ತಿದ್ದಾನೆ.

ಇದೀಗ ಲಂಡನ್ ನಲ್ಲಿ ನಡೆಯುತ್ತಿರುವ ವರ್ಲ್ಡ್ ಕಪ್ ನಲ್ಲಿ ಬ್ಯುಸಿಯಾಗಿರುವ ಮ್ಯಾಕ್ಸ್ ವೆಲ್, ಈ ಟೂರ್ನಿ ಮುಗಿಯುತ್ತಿದ್ದಂತೆ ಮದುವೆಯಾಗಲಿದ್ದಾರೆ ಅನ್ನೋ ಸುದ್ದಿ ಹರಿದಾಡ್ತಿದೆ. ಇದಕ್ಕೂ ಮೊದ್ಲು ಜೇನೆ ಎಗ್ಬರ್ಗ್ ಜೊತೆ ಮ್ಯಾಕ್ಸ್ ಹೆಸರು ಕೇಳಿ ಬಂದಿತ್ತು. ಅವರೊಬ್ಬರು ಸುತ್ತಾಡಿದ ಫೋಟೋಗಳು ಸಹ ಸಾಕಷ್ಟು ಸೌಂಡ್ ಮಾಡಿದ್ವು. ಪ್ರೀತಿ, ವಿರಹ ಎಲ್ಲವನ್ನೂ ಅನುಭವಿಸಿರುವ ಮ್ಯಾಕ್ಸ್ ಇದೀಗ ಭಾರತೀಯ ಬ್ಯೂಟಿ ಹಿಂದೆ ಬಿದ್ದಿದ್ದಾನೆ. ಇವರಿಬ್ಬರಾದ್ರೂ ಮದುವೆಯಾಗ್ತಾರಾ ಅನ್ನೋದು ಮುಂದಿನ ದಿನಗಳಲ್ಲಿ ತಿಳಿಯಲಿದೆ.

ಜೇನೆ ಎಗ್ಬರ್ಗ್ ಜೊತೆ ಮ್ಯಾಕ್ಸ್

TAG


Leave a Reply

Your email address will not be published. Required fields are marked *

error: Content is protected !!