ಜಮಖಂಡಿಯಲ್ಲಿ ಮಾಯವಾದ ಡಾಂಬರ್ ರಸ್ತೆ: ಶಾಸಕರು ಹೇಳಿದ್ದೇನು?

680

ಪ್ರಜಾಸ್ತ್ರ ವಿಶೇಷ ಸುದ್ದಿ, ಕುಮಾರ ಜಾಧವ

ಜಮಖಂಡಿ: ಗಿಡಗಂಟೆಗಳಿಂದ ಆವರಿಸಿದ ರಸ್ತೆ. ಡಾಂಬರೀಕರಣ ಕಿತ್ತು ಕಲ್ಲುಮಣ್ಣಿನ ಹಾದಿ. ಮಳೆಯಾದರೆ ನೀರು ತುಂಬಿದ ಗುಂಡಿಗಳು. ಇದು ಗ್ರಾಮದ ತೆಲಸಂಗ ರಸ್ತೆಯಿಂದ ಕೃಷ್ಣಾ ನಗರದ ಪಕ್ಕದಲ್ಲಿ ಹೊಂದಿಕೊಂಡಿರುವ ಅರಟಾಳ ರಸ್ತೆಯ ಸ್ಥಿತಿ.

ಗ್ರಾಮದ ಈ ರಸ್ತೆ ಜಿಲ್ಲಾ ಪಂಚಾಯತಿ ವ್ಯಾಪ್ತಿಗೆ ಸೇರಿದ್ದರೂ ಸ್ವತಃ ಇಲಾಖೆ ಅಧಿಕಾರಿಗಳೆ ಮರೆತು ಹೋಗಿದ್ದಾರೆ. ಇದ್ರಿಂದಾಗಿ ಎಲ್ಲೆಂದರಲ್ಲಿ ಸಾಕಷ್ಟು ಗುಂಡಿಗಳು ಬಿದ್ದಿವೆ. ಮಳೆಗಾಲ ಶುರುವಾಗಿರುವುದ್ರಿಂದ ಗುಂಡಿಗಳು ತುಂಬಿ ವಾಹನ ಸವಾರರಿಗೆ, ದಾರಿಹೋಕರಿಗೆ ತೊಂದರೆಯಾಗ್ತಿದೆ.

ಸದ್ಯದ ಪರಿಸ್ಥಿತಿಯಲ್ಲಿ ಯಾವುದೇ ರೀತಿಯ ಅನುದಾನ ಇರುವುದಿಲ್ಲ. ಬೇರೆ ಯಾವುದಾದರೂ ಅನುದಾನದಲ್ಲಿ ರಸ್ತೆ ಸುಧಾರಿಸಲು ವ್ಯವಸ್ಥೆ ಮಾಡಲಾಗುವದು.

ಆನಂದ ನ್ಯಾಮಗೌಡ, ಶಾಸಕರು, ಜಮಖಂಡಿ

ಕೃಷ್ಣಾ ನಗರ, ಜೋಗ್ಯಾರ ವಸ್ತಿ, ಬೆಟಕಾಳೆ ವಸ್ತಿ, ನ್ಯಾಮಗೌಡ ವಸ್ತಿ, ನರೋಟಿ ವಸ್ತಿ, ಸನಾಳ ವಸ್ತಿ ಹಾಗೂ ಇತರೆ ತೋಟದ ವಸ್ತಿಗಳಿಗೆ ಸಂಪರ್ಕ ಕಲ್ಪಿಸುತ್ತದೆ. ಅಲ್ದೇ, ಈ ರಸ್ತೆಯಿಂದ ಒಳ ಮಾರ್ಗವಾಗಿ ಅಥಣಿ ತಾಲೂಕಿನ ಅರಟಾಳ, ಬಾಡಗಿ, ಐಗಳಿ, ಕೊಹಳ್ಳಿ ಸೇರಿ ಇತರೆ ಹಳ್ಳಿಗಳಿಗೆ ಸಂಪರ್ಕ ಕಲ್ಪಿಸುತ್ತದೆ. ಇದರಿಂದ ಸಾರ್ವಜನಿಕರಿಗೆ ಹಾಗೂ ರೈತರಿಗೆ ಸಮಯ ಹಾಗೂ ಹಣ ಉಳಿತಾಯವಾಗಲಿದೆ. ಆದ್ರಿಂದ ಸಂಬಂಧಿಸಿದ ಅಧಿಕಾರಿಗಳು ಕೂಡಲೇ ರಸ್ತೆಯನ್ನ ಸರಿಪಡಿಸಿ ಎಂದು ಒತ್ತಾಯಿಸಿದ್ದಾರೆ.




Leave a Reply

Your email address will not be published. Required fields are marked *

error: Content is protected !!