ಮಹಾಮಾರಿ ಕೊರೊನಾ

408

ಸರ್ಕಾರಿ ಶಾಲಾ ಶಿಕ್ಷಕರಾದ ರಾಚು ಕೊಪ್ಪಾ ಅವರು ಪ್ರಸ್ತುತವಾಗಿ ಇಡೀ ವಿಶ್ವವನ್ನ ಕಾಡುತ್ತಿರುವ ಭಯಾನಕ ಕರೋನಾ ಕುರಿತಾದ ಕವಿತೆಯೊಂದನ್ನ ರಚಿಸಿದ್ದಾರೆ. ಇವತ್ತಿನ ಸ್ಥಿತಿಗೆ ಕಾರಣವೇನು ಅನ್ನೋದತ್ತ ಇಲ್ಲಿನ ಸಾಲುಗಳು ಬೆಳಕು ಚೆಲ್ಲುತ್ತವೆ..

ಹುಡುಕಿ ಹುಡುಕಿ

ಬದುಕ ಹೊರಟ ನಮಗೆ

ಕೆಡಹಿ ಕೆಡಹಿ ಕೊಲ್ಲ

ಹೊರಟಿದೆ ಕೊರೊನಾ ಎನುವ ಮಾರಿ

ಪಾಪ ಇಲ್ಲಿ ಪುಣ್ಯ ಎಲ್ಲಿ

ಕರುಣೆ ತೀರ ದೂರ ಇಲ್ಲಿ

ಎಲ್ಲ ಬಗೆಯ ಕನಸು ನಮಗೆ

ಹೊಸಕಿ ಹಾಕ ಹೊರಟಿದೆ

ಹೊಸತು ಮೂಡಿ ಬರಲು

ಏಸು ದಿನ ಕಾಯಬೇಕು?

ದೇಶ, ಭಾಷೆ, ಕಾಲ ಮೀರಿ

ಚಾಚಿಬಿಟ್ಟಿದೆ ನೂರು ಕಾಲು

ದೂರ ತಳ್ಳಿ ಬರುವ ನಮಗೆ

ಮತ್ತೆ ಮತ್ತೆ ಮುತ್ತುತಿದೆ

ಹೊತ್ತು ಗೊತ್ತು ಇಲ್ಲದೆ

ಹತ್ತಿ-ಹತ್ತಿ ಕಾಡುತಿದೆ

ಬಲ್ಲ ಜನರ ಮಾತು ಮೀರಿ

ಮನಸು ಬಂದ ಹಾಗೆ ನಡೆವೆವು

ನರಳಿ ನರಳಿ ಹೋಗುತಿಹೆವು

ರುದ್ರಭೂಮಿ ಹುಡುಕಿಕೊಂಡು

ಸತ್ಯವನ್ನು ಅರಿತುಕೊಂಡು

ಹೇಳಿದುದನು ಕೇಳಿಕೊಂಡು

ನಾಲ್ಕು ಜನರ ಬೆರೆತುಕೊಂಡು

ಬದುಕು ಒಂದು ಮಗುವ ನೋಡಿಕೊಂಡು

ಲೇಖಕರು: ರಾಚು ಕೊಪ್ಪಾ, ಶಿಕ್ಷಕರು, ಬಂಥನಾಳ



Leave a Reply

Your email address will not be published. Required fields are marked *

error: Content is protected !!