ನಟಿ ಜೊತೆಗಿನ ಬೆತ್ತಲೆ ಫೋಟೋ ಹಾಕಿ ಈ ಪ್ರಶ್ನೆ ಕೇಳಿದ

497

ಬಾಲಿವುಡ್ ನಟ ಮಿಲಿಂದ್ ಸೋಮನ್, ಒಂದು ಕಾಲದ ಸ್ಟಾರ್ ಮಾಡೆಲ್. ಜಾಹೀರಾತು ದುನಿಯಾದಲ್ಲಿ ಮಿಂಚಿ, ಬಿಟೌನ್ ಅಂಗಳದಲ್ಲಿ ಕಾಣಿಸಿಕೊಂಡವರು. ಸೋಷಿಯಲ್ ಮೀಡಿಯಾದಲ್ಲಿ ಬ್ಯುಸಿಯಾಗಿರುವ ಸ್ಟೈಲ್ ಐಕಾನ್. ಇತ್ತೀಚೆಗೆ ತನ್ಗಿಂತ 25 ವರ್ಷದ ಚಿಕ್ಕವಳೊಂದಿಗೆ ವಿವಾಹ ಮಾಡಿಕೊಂಡು ಸುದ್ದಿಯಾದ. ಇದೀಗ ನಟಿಯೊಂದಿಗಿನ ಬೆತ್ತಲೇ ಫೋಟೋ ಹಾಕಿದ್ದಾನೆ.

1995ರಲ್ಲಿ ಟಫ್ ಶೂ ಜಾಹೀರಾತಿಗಾಗಿ ಮಧು ಸಪ್ರೆ ಜೊತೆ ಬೆತ್ತಲೆಯಾಗಿ ಫೋಟೋ ಶೂಟ್ ನಡೆಸಿದ್ದ. ಹೆಬ್ಬಾವೊಂದು ಮೈಮೇಲೆ ಹಾಕಿಕೊಂಡು ಶೂ ಹಾಕಿಕೊಂಡ ಈ ಜೋಡಿ ಪೋಸ್ ಕೊಟ್ಟಿದೆ. ಈಗಿನಂತೆ ಆಗ ಸೋಷಿಯಲ್ ಮೀಡಿಯಾ ಇರ್ಲಿಲ್ಲ. ಮೊಬೈಲ್ ಸೇವೆ ಇರ್ಲಿಲ್ಲ. ಇಂಟರ್ ನೆಟ್ ಸಂಪರ್ಕ ಇಲ್ಲ. ಹೀಗಾಗಿ ಈ ಬೆತ್ತಲೆ ಫೋಟೋವನ್ನ ಈಗ ಸೋಷಿಯಲ್ ಮೀಡಿಯಾದಲ್ಲಿ ಹಾಕಿದ್ರೆ ಯಾವ ರೀತಿ ಪ್ರತಿಕ್ರಿಯೆ ಬರುತ್ತೆ ಅನ್ನೋ ಪ್ರಶ್ನೆ ಮಾಡಿದ್ದಾರೆ.

ಸೋಷಿಯಲ್ ಮೀಡಿಯಾದಲ್ಲಿ ಇದು ಬಿರುಗಾಳಿ ಎಬ್ಬಿಸಿತಿತ್ತು ಎಂದು ಕಾಮೆಂಟ್ಸ್ ಮಾಡಿದ್ದಾರೆ. ಇದೆಲ್ಲ ಈಗ್ಯಾಕೆ ಎಂದು ಕೆಲವರು ಪ್ರಶ್ನಿಸಿದ್ದಾರೆ. ಒಟ್ಟಿನಲ್ಲಿ ಮಿಲಿಂದ್ ಸೋಮನ್ ಆಗಾಗ ಸುದ್ದಿಯಲ್ಲಿರಬೇಕೆಂದು ಬಯಸುವವನಾಗಿದ್ದಾನೆ.




Leave a Reply

Your email address will not be published. Required fields are marked *

error: Content is protected !!