ಪೂನಂ ಬಳಿಕ ಮಿಲಿಂದ್ ವಿರುದ್ಧ ಎಫ್ಐಆರ್

269

ಪ್ರಜಾಸ್ತ್ರ ಸಿನಿಮಾ ಡೆಸ್ಕ್

ನಟಿ, ಮಾಡೆಲ್ ಪೂನಂ ಪಾಂಡೆ ಗೋವಾದ ಬೀಚ್ ನಲ್ಲಿ ಅರೆನಗ್ನವಾಗಿ ಫೋಟೋ ಶೂಟಿಂಗ್ ಮಾಡಿದ್ದಾಳೆ ಅನ್ನೋ ಕಾರಣಕ್ಕೆ ಎಫ್ಐಆರ್ ದಾಖಲಿಸಲಾಗಿದೆ. ಇದರ ಬೆನ್ನಲ್ಲೇ ನಟ, ಮಾಡೆಲ್ ಮಿಲಿಂದ್ ಸೋಮನ್ ವಿರುದ್ಧ ಇದೀಗ ಎಫ್ಐಆರ್ ದಾಖಲಾಗಿದೆ.

ಪೂನಂ ಪಾಂಡೆ ಅರೆನಗ್ನ ಫೋಟೋ ಭಾರಿ ಚರ್ಚೆಗೆ ಗ್ರಾಸವಾಗಿತ್ತು. ಹೀಗಾಗಿ ಪೊಲೀಸರು ಎಫ್ಐಆರ್ ದಾಖಲಿಸಿದ್ರು. ಆದ್ರೆ, ಮಿಲಿಂದ್ ತನ್ನ ಹುಟ್ಟು ಹಬ್ಬದಂದು ನಗ್ನವಾಗಿ ಗೋವಾ ಬೀಚ್ ನಲ್ಲಿ ಓಡಿದ್ರೂ ಪೊಲೀಸರು ಕ್ರಮ ಕೈಗೊಂಡಿಲ್ಲ. ಹೆಣ್ಮಕ್ಕಳಿಗೊಂದು ಗಂಡ್ಮಕ್ಕಳಿಗೊಂದು ಕಾನೂನು ಇದ್ಯಾ ಅನ್ನೋ ಪ್ರಶ್ನೆ ಎದ್ದಿತು.

ಸಾರ್ವಜನಿಕರ ವಿರೋಧ, ಆಕ್ರೋಶ ವ್ಯಕ್ತವಾಗುತ್ತಲೇ ಇದೀಗ ನಟ, ಮಾಡೆಲ್ ಮಿಲಿಂದ್ ಸೋಮನ್ ವಿರುದ್ಧ ಸಹ ಎಫ್ಐಆರ್ ದಾಖಲಿಸಲಾಗಿದೆ. ಪೂನಂ ಪಾಂಡೆ ಆಗ್ಲಿ ಮಿಲಿಂದ್ ಸೋಮನ್ ಆಗ್ಲಿ ಇದೆ ಮೊದಲ ಬಾರಿಗೆ ಈ ರೀತಿ ಕಾಣಿಸಿಕೊಂಡಿಲ್ಲ. ಇವರು ಜೀವನ ಬರೀ ವಿವಾದಿಂದಲೇ ಕೂಡಿದೆ.




Leave a Reply

Your email address will not be published. Required fields are marked *

error: Content is protected !!