ಪೂನಂ, ಶರ್ಲಿನ್ ಚೋಪ್ರಾ ಜೊತೆ ಸೇರಿ ರಾಜ್ ಕುಂದ್ರಾ ಬ್ಲೂ ಫಿಲ್ಮ್

188

ಪ್ರಜಾಸ್ತ್ರ ಸಿನಿಮಾ ಡೆಸ್ಕ್

ಬಾಲಿವುಡ್ ನಟಿ ಶಿಲ್ಪಾ ಶೆಟ್ಟಿ ಪತಿ, ಉದ್ಯಮಿ ರಾಜ್ ಕುಂದ್ರಾ ಬ್ಲೂ ಫಿಲ್ಮ್ ನಿರ್ಮಾಣದಲ್ಲಿ ಬಂಧನವಾಗಿ ಜಾಮೀನು ಮೇಲೆ ಬಿಡುಗಡೆಯಾಗಿದ್ದಾರೆ. ಇದೀಗ ಮಹಾರಾಷ್ಟ್ರ ಪೊಲೀಸರು ಚಾರ್ಜ್ ಶೀಟ್ ಸಲ್ಲಿಸಿದ್ದು, ಮಾಡೆಲ್ ಗಳಾದ ಪೂನಂ ಪಾಂಡೆ, ಶರ್ಲಿನ್ ಚೋಪ್ರಾ ಜೊತೆ ಸೇರಿಕೊಂಡು ರಾಜ್ ಕುಂದ್ರಾ ಬ್ಲೂ ಫಿಲ್ಮ್ ನಿರ್ಮಿಸುತ್ತಿದ್ದರು ಎಂದು ಹೇಳಲಾಗಿದೆ.

ಇದರಲ್ಲಿ ನಿರ್ಮಾಪಕಿ ಮೀತಾ ಜುಂಜುನ್ ವಾಲಾ, ಕ್ಯಾಮೆರಾಮನ್ ದುಬೆ ಎಂಬುವರ ಹೆಸರು ಸಹ ಸೇರಿಕೊಂಡಿದೆ. ಫೈವ್ ಸ್ಟಾರ್ ಹೋಟೆಲ್ ಗಳಲ್ಲಿ ಅಶ್ಲೀಲ ವಿಡಿಯೋಗಳ ಚಿತ್ರೀಕರಣ ನಡೆಸುತ್ತಿದ್ದು, ಅವುಗಳನ್ನು ಒಟಿಟಿ ಫ್ಲಾಟ್ ಫಾರ್ಮ್ ಗೆ ಬಿಡುವ ಮೂಲಕ ಹಣ ಗಳಿಕೆ ನಡೆಸಿದ್ದರು.

ಮದ್ ದ್ವೀಪದ ಬಂಗಲೆ ಮೇಲೆ 2021 ಫೆಬ್ರವರಿಯಲ್ಲಿ ಪೊಲೀಸರು ದಾಳಿ ನಡೆಸಿದಾಗ ರಾಜ್ ಕುಂದ್ರಾ ನಡೆಸುತ್ತಿದ್ದ ದಂಧೆ ಬಯಲಾಗಿತ್ತು. 2 ತಿಂಗಳು ಜೈಲುವಾಸ ಅನುಭವಿಸಿ ಬಿಡುಗಡೆಯಾಗಿದ್ದಾರೆ.




Leave a Reply

Your email address will not be published. Required fields are marked *

error: Content is protected !!