ಎಲ್ಲದಕ್ಕೂ ದೇಶದ್ರೋಹ ಪ್ರಕರಣ ದಾಖಲಿಸಲು ಇದು ಭಾರತವಲ್ಲವೆಂದ ಪಾಕ್ ನ್ಯಾಯಾಧೀಶ

262

ಪ್ರಜಾಸ್ತ್ರ ಸುದ್ದಿ

ಇಸ್ಲಾಮಾಬಾದ್: ಪಾಕಿಸ್ತಾನ ಇಸ್ತಾಂಬುಲ್ ಹೈಕೋರ್ಟ್ ನ್ಯಾಯಾಧೀಶರು ಹೇಳಿರುವ ಮಾತು ಇದು ದೇಶದಲ್ಲಿ ಭಾರಿ ಸುದ್ದು ಮಾಡ್ತಿದೆ. ಅದು ಏನು ಅಂದರೆ, ಎಲ್ಲದಕ್ಕೂ ದೇಶ ದ್ರೋಹ ಪ್ರಕರಣ ದಾಖಲಿಸಲು ಇದು ಭಾರತವಲ್ಲ. ಸರ್ಕಾರ ಹಾಗೂ ಅನ್ಯಾಯದ ವಿರುದ್ಧ ಹೋರಾಟ ಮಾಡಲು ಹೆದರುವ ಅಗತ್ಯವಿಲ್ಲ. ನಿಮ್ಗೆ ರಕ್ಷಣೆ ನೀಡಲು ಕೋರ್ಟ್ ಇದೆ. ಇಲ್ಲಿ ಎಲ್ಲದಕ್ಕೂ ದೇಶದ್ರೋಹ ಪ್ರಕರಣ ದಾಖಲಿಸಲು ಇದು ಭಾರತವಲ್ಲ ಎಂದು ಹೇಳಿದ್ದಾರೆ.

ಮಾನವ ಹಕ್ಕುಗಳ ಹೋರಾಟಗಾರ ಮಂಜೂರ್ ಪಶ್ತೀನರನ್ನ ಜನವರಿ 27ರಂದು ಬಂಧಿಸಲಾಗಿತ್ತು. ಇದನ್ನ ಖಂಡಿಸಿ ಜನವರಿ 28ರಂದು ಪ್ರತಿಭಟನೆ ನಡೆಸಲಾಗಿತ್ತು. ಈ ವೇಳೆ 23 ಜನರನ್ನ ಇಸ್ಲಾಮಾಬಾದ್ ಪೊಲೀಸರು ಬಂಧಿಸಿದ್ರು. ಇದರಲ್ಲಿ ಇಬ್ಬರ ಮೇಲೆ ದೇಶದ್ರೋಹ ಪ್ರಕರಣ ದಾಖಲಸಲಾಗಿತ್ತು. ಇದರ ವಿಚಾರಣ ವೇಳೆ ಇಸ್ತಾಂಬುಲ್ ಹೈಕೋರ್ಟ್ ನ್ಯಾಯಾಧೀಶ ಅತರ್ ಮಿನಲ್ಹಾ, ನಾವು ಟೀಕೆಗೆ ಭಯ ಪಡಬಾರದು. ನ್ಯಾಯಾಲಯ ಪ್ರತಿಯೊಬ್ಬರ ಸಾಂವಿಧಾನಿಕ ಹಕ್ಕುಗಳನ್ನ ರಕ್ಷಿಸಲಾಗುತ್ತೆ. ಇದು ಪಾಕಿಸ್ತಾನ. ಭಾರತವಲ್ಲ ಎಂದು ಹೇಳಿದ್ದಾರೆ. ಇವರ ಮಾತು ಅಂತಾರಾಷ್ಟ್ರೀಯ ಮಟ್ಟದಲ್ಲಿ ಭಾರಿ ಚರ್ಚೆಗೆ ಗ್ರಾಸವಾಗಿದೆ.




Leave a Reply

Your email address will not be published. Required fields are marked *

error: Content is protected !!