ನಾನು ಜೀವಂತವಾಗಿದ್ದೇನೆ: ಪೂನಂ ಪಾಂಡೆ

192

ಪ್ರಜಾಸ್ತ್ರ ಸಿನಿಮಾ ಡೆಸ್ಕ್

ರೂಪದರ್ಶಿ, ನಟಿ ಪೂನಂ ಪಾಂಡೆ ಮೃತಪಟ್ಟಿದ್ದಾರೆ ಎಂದು ಶುಕ್ರವಾರ ಎಲ್ಲೆಡೆ ಸುದ್ದಿ ಹರಿದಾಡಿದೆ. ಪ್ರತಿಯೊಂದ ಮಾಧ್ಯಮಗಳಲ್ಲಿ ಸುದ್ದಿಯಾಗಿದೆ. ಆಕೆಯ ಮ್ಯಾನೇಜರ್ ಸೋಷಿಯಲ್ ಮೀಡಿಯಾದಲ್ಲಿ ಮಾಡಿದ ಪೋಸ್ಟ್ ನಲ್ಲಿ ಪೂನಂ ಸಾವಿನ ಕುರಿತು ಸ್ಪಷ್ಟಪಡಿಸಿದ್ದರು. ಇದೀಗ ನೋಡಿದರೆ ನಾನು ಜೀವಂತವಾಗಿದ್ದೇನೆ. ಮೃತಪಟ್ಟಿಲ್ಲ ಎಂದು ಸ್ವತಃ ಪೂನಂ ಪಾಂಡೆ ವಿಡಿಯೋ ಮಾಡಿದ್ದಾಳೆ.

ಗರ್ಭಕಂಠ ಕ್ಯಾನ್ಸರ್ ನನ್ನನ್ನು ಬಲಿ ಪಡೆದಿಲ್ಲ. ಈ ಬಗ್ಗೆ ಎಲ್ಲರಿಗೂ ಜಾಗೃತಿ ಮೂಡಿಸಬೇಕಿದೆ. ಇದೊಂದು ಗುಣಮುಖವಾಗುವ ಕಾಯಿಲೆ. ಇದು ತಿಳಿಯದೆ ಸಾವಿರಾರು ಮಹಿಳೆಯರು ಮೃತಪಡುತ್ತಿದ್ದಾರೆ. ಈ ಕುರಿತು ಹೆಚ್ಚಿನ ಮಾಹಿತಿ ತಿಳಿಯಲು ತಮ್ಮ ವೆಬ್ ಸೈಟ್ ಗೆ ಭೇಟಿ ಕೊಡಿ ಎಂದು ಹೇಳಿದ್ದಾಳೆ.

ಈ ರೀತಿಯಾಗಿ ಅನಾವಶ್ಯಕವಾಗಿ ಜನರಲ್ಲಿ ಗೊಂದಲ ಉಂಟು ಮಾಡಿರುವುದರ ಬಗ್ಗೆ ಆಕ್ರೋಶ ವ್ಯಕ್ತವಾಗಿದೆ. ಗಂಭೀರ ವಿಷಯವನ್ನು ಹೇಳುವ ಸಂದರ್ಭದಲ್ಲಿಯಾದರೂ ಸರಿಯಾಗಿ ನಡೆದುಕೊಳ್ಳಬೇಕು ಎಂದು ಸಾರ್ವಜನಿಕರು ಕಿಡಿ ಕಾರಿದ್ದಾರೆ.




Leave a Reply

Your email address will not be published. Required fields are marked *

error: Content is protected !!