ಸಂಸದ ಡಿ.ಕೆ ಸುರೇಶ ಹೇಳಿಕೆಗೆ ಧ್ವನಿಗೂಡಿಸಿದ ಡಿಸಿಎಂ

145

ಪ್ರಜಾಸ್ತ್ರ ಸುದ್ದಿ

ಕಲಬುರಗಿ: ದಕ್ಷಿಣ ಭಾರತದ ರಾಜ್ಯಗಳಿಗೆ ಕೇಂದ್ರದಿಂದ ಅನುದಾನ ಹಂಚಿಕೆ ಅನ್ಯಾಯವಾಗುತ್ತಿದೆ. ಹೀಗೆಯಾದರೆ ಪ್ರತ್ಯೇಕ ರಾಷ್ಟ್ರದ ಬೇಡಿಕೆ ಇಡಬೇಕಾಗುತ್ತೆ ಎಂದು ಕಾಂಗ್ರೆಸ್ ಸಂಸದ ಡಿ.ಕೆ ಸುರೇಶ್ ಹೇಳಿದ್ದರು. ಇದನ್ನು ಬಿಜೆಪಿ ನಾಯಕರು ಖಂಡಿಸಿದ್ದಾರೆ. ಸಂಸತ್ ನಲ್ಲೂ ಇದು ಪ್ರತಿಧ್ವನಿಸಿದೆ.

ಸಹೋದರನಿಗೆ ಹೇಳಿಕೆಗೆ ಅಣ್ಣ ಡಿಸಿಎಂ ಡಿ.ಕೆ ಶಿವಕುಮಾರ್ ಧ್ವನಿಗೂಡಿಸಿದ್ದು, ತೆರಿಗೆ ಪಾಲು ನ್ಯಾಯುತವಾಗಿ ಹಂಚಿಕೆಯಾಗದೆ ಹೋದರೆ ಪ್ರತ್ಯೇಕ ರಾಷ್ಟ್ರದ ಬೇಡಿಕೆ ಇಡಬೇಕಾಗುತ್ತೆ. ಕಾಂಗ್ರೆಸ್ ಇಡೀ ಭಾರತವನ್ನು ಒಗಟ್ಟಾಗಿ ಇರಿಸಿದೆ. ನಮ್ಮ ನಾಯಕರು ದೇಶಕ್ಕೆ ಪ್ರಾಣ ಅರ್ಪಿಸಿದ್ದಾರೆ ಎಂದರು.

ಕೇಂದ್ರದಿಂದ ಬರ ಪರಿಹಾರ ಬಿಡುಗಡೆಯಾಗಿಲ್ಲ. ಬಜೆಟ್ ನಲ್ಲಿ ಅನ್ಯಾಯ. ಕೇಂದ್ರದಿಂದ ನ್ಯಾಯ ಒದಗಿಸಲು ಆಗದ ಬಿಜೆಪಿ ನಾಯಕರು ಆತ್ಮಾವಲೋಕನ ಮಾಡಿಕೊಳ್ಳಬೇಕು. ಅನುದಾನ ಬಿಡುಗಡೆಯಲ್ಲಿನ ತಾರತಮ್ಯ ಖಂಡಿಸಿ ಫೆಬ್ರವರಿ 7ರಂದು ನದೆಹಲಿಯಲ್ಲಿ ಪ್ರತಿಭಟನೆ ಮಾಡುತ್ತಿದ್ದೇವೆ ಅಂತಾ ಹೇಳಿದರು.




Leave a Reply

Your email address will not be published. Required fields are marked *

error: Content is protected !!