ಅಥಣಿಗೆ 2 ಸಾವಿರ ಕೋಟಿ: ಜಾರಕಿಹೊಳಿ

367

ಪ್ರಜಾಸ್ತ್ರ ಸುದ್ದಿ

ಅಥಣಿ: 2018ರ ಚುನಾವಣೆ ಟೈಂನಲ್ಲಿ ಈ ಭಾಗಕ್ಕೆ ನೀರಾವರಿ ಕೆಲಸ ಮಾಡುವುದಾಗಿ ಭರವಸೆ ನೀಡಿದ್ದೆ. ಸಮ್ಮಿಶ್ರ ಸರ್ಕಾರದಿಂದ ಸ್ಪಂದನೆ ಸಿಗಲಿಲ್ಲ. ಹೀಗಾಗಿ ಕಾಂಗ್ರೆಸ್ ನಿಂದ ಹೊರ ಬಂದಿದ್ದೇವೆ. ಮುಂದಿನ 3 ವರ್ಷಗಳಲ್ಲಿ ಅಥಣಿ ಕ್ಷೇತ್ರಕ್ಕೆ ನೀರಾವರಿ ವಿಚಾರದಲ್ಲಿ 2 ಸಾವಿರ ಕೋಟಿ ರೂಪಾಯಿ ನೀಡುವುದಾಗಿ, ಜಲಸಂಪನ್ಮೂಲ ಸಚಿವ ರಮೇಶ ಜಾರಕಿಹೊಳಿ ಹೇಳಿದ್ದಾರೆ.

ಕೊಟ್ಟಲಗಿ ಗ್ರಾಮದಲ್ಲಿ ನಡೆದ ಜನಸಂಪರ್ಕ ಸಭೆಯಲ್ಲಿ ಮಾತ್ನಾಡಿದ ಸಚಿವರು, ನೀರಾವರಿ ವಿಚಾರದಲ್ಲಿ ರಾಜಕೀಯ ಮಾಡುವುದಿಲ್ಲ. ಶಾಸಕ ಮಹೇಶ ಕುಮಟಳ್ಳಿ ಕ್ಷೇತ್ರಕ್ಕೆ 2 ಸಾವಿರ ಕೋಟಿ ಬಿಡುಗಡೆ ಮಾಡಿಸುವ ಜವಾಬ್ದಾರಿ ನನ್ನದು. ಕೆಲಸ ಮಾಡಿಸುವ ಕೆಲಸ ನಿಮ್ಮದು ಎಂದು ಅಧಿಕಾರಿಗಳಿಗೆ ಸೂಚಿಸಿದ್ರು.

ಶಾಸಕ ಮಹೇಶ ಕುಮಟಳ್ಳಿ ಮಾತ್ನಾಡಿ, 5 ಹೆಕ್ಟೇರ್ ಜಮೀನಿಗೊಂದು ಕೃಷಿ ಹೊಂಡ ನಿರ್ಮಿಸಲಾಗುವುದು. ಕೆರೆ, ಹಳ್ಳ ಕೊಳ್ಳ ತುಂಬಿಸುವುದು, ಜಮೀನುಗಳಿಗೆ ನೀರು ಕೊಡಿಸವ ಕೆಲಸ ಮಾಡಲಾಗುವುದು ಎಂದರು. ಈ ವೇಳೆ ಜಿಲ್ಲಾ ಪಂಚಾಯ್ತಿ ಸದಸ್ಯರಾದ ಸಿದ್ದಪ್ಪ ಮುದಕಣ್ಣವರ, ಗುರುಪ್ಪ ದಾಶ್ಯಾಳ ಸೇರಿದಂತೆ ಹಲವರು ವೇದಿಕೆ ಮೇಲಿದ್ರು.




Leave a Reply

Your email address will not be published. Required fields are marked *

error: Content is protected !!