ಸಾರಿಗೆ ಸಚಿವರ ಖಾಸಗಿ ವಾಹನಕ್ಕೂ ಸರ್ಕಾರಿ ಡೀಸೆಲ್!

282

ಪ್ರಜಾಸ್ತ್ರ ಸುದ್ದಿ

ಬೆಳಗಾವಿ: ಸಾರಿಗೆ ಸಚಿವ ಲಕ್ಷ್ಮಣ ಸವದಿ ಅವರ ಖಾಸಗಿ ಕಾರಿಗೆ ಸರ್ಕಾರಿ ಬಂಕ್ ನಿಂದ ಡೀಸೆಲ್ ತುಂಬಿಸಿಕೊಂಡಿರುವುದು ಸಾಕಷ್ಟು ವಿರೋಧಕ್ಕೆ ಕಾರಣವಾಗಿದೆ. ಡೀಸೆಲ್ ನೀಡಿದ ಸಿಬ್ಬಂದಿಗೆ ನೋಟಿಸ್ ನೀಡಲಾಗಿದೆ.

ಸಾರಿಗೆ ಇಲಾಖೆಯಿಂದ ನಿರ್ಮಿಸಲಾಗಿದ್ದ ವಿಶ್ರಾಂತಿ ಗೃಹ ಉದ್ಘಾಟನೆಗೆ ಸಚಿವ ಸವದಿ ಬಂದಿದ್ರು. ಈ ವೇಳೆ ಅವರ ಖಾಸಗಿ ಕಾರಿಗೆ ನಗರದ 3ನೇ ಬಸ್ ಡಿಪೋದಲ್ಲಿರುವ ಸರ್ಕಾರಿ ಬಂಕ್ ನಿಂದ 44 ಲೀಟರ್ ಡೀಸೆಲ್ ತುಂಬಿಸಿಕೊಳ್ಳಲಾಗಿದೆ. ಇದು ಎಲ್ಲೆಡೆ ವೈರಲ್ ಆಗಿದೆ. ಈ ಸಂಬಂಧ ನಿಯಮ ಉಲ್ಲಂಘಿಸಿದ ಡಿಪೋದ ಕಿರಿಯ ಸಹಾಯಕ ಬಿ.ಎಸ್ ಕಿಶೋರಗೆ ಘಟಕದ ವ್ಯವಸ್ಥಾಪಕರು, ಕಾರಣ ಕೇಳಿ ನೋಟಿಸ್ ಜಾರಿ ಮಾಡಿದ್ದಾರೆ.




Leave a Reply

Your email address will not be published. Required fields are marked *

error: Content is protected !!