ಹುಡ್ಗಿ ಜೊತೆ ಶಾಸಕರ ಡಿಂಗ್ ಡಾಂಗ್

533

ಬಿಹಾರ: ಶಾಸಕರೊಬ್ಬರು ಹುಡ್ಗಿಯೊಬ್ಬಳ ಜೊತೆ ಭರ್ಜರಿಯಾಗಿ ಡ್ಯಾನ್ಸ್ ಮಾಡಿರುವ ವಿಡಿಯೋ ಇದೀಗ ಫುಲ್ ವೈರಲ್ ಆಗಿದೆ. ಕಳೆದ ಎರಡು ದಿನಗಳ ಹಿಂದೆ ಈ ವಿಚಾರ ಬೆಳಕಿಗೆ ಬಂದಿದ್ದು, ಇದೀಗ ಎಲ್ಲೆಡೆ ಈ ವಿಡಿಯೋ ವೈರಲ್ ಆಗಿದೆ. ಶಾಸಕರ ವಿರುದ್ಧ ಸೂಕ್ತ ಕ್ರಮಕ್ಕೆ ಇದೀಗ ಆಗ್ರಹಿಸಲಾಗಿದೆ.

ಬಿಹಾರದ ಆರ್ ಜೆಡಿ ಶಾಸಕ ಯದುಭೋಷಣ್ ಮೋರ್ಹಾ ನಗರದಲ್ಲಿ ಈ ರೀತಿ ಡ್ಯಾನ್ಸ್ ಮಾಡಿದ್ದಾರೆ ಅನ್ನೋ ಸುದ್ದಿ ಸಾಕಷ್ಟು ಚರ್ಚೆಗೆ ಗ್ರಾಸವಾಗಿದೆ. ಇಂಡೋ ಮೈನ್ಮಾರ್ ಬಳಿ ಫುಲ್ ಎಂಜಾಯ್ ನಲ್ಲಿ ಶಾಸಕರು ಡ್ಯಾನ್ಸ್ ಮಾಡಿದ್ದಾರಂತೆ. ಮಣಿಪುರಗೆ ಅಧ್ಯಯನ ಪ್ರವಾಸವಾಗಿದ್ದು, ಇದೇನಾ ಅಧ್ಯಯನಾ ಅಂತಾ ಜನ ಕೇಳುವಂತಾಗಿದೆ.

ಆರ್ ಜೆಡಿ ಶಾಸಕ ಯದುಭೋಷಣ್

ಈ ವಿಡಿಯೋದಿಂದಾಗಿ ಆರ್ ಜೆಡಿ ಪಾಳೆಯದಲ್ಲಿ ಸಾಕಷ್ಟು ಮುಜುಗರ ಉಂಟಾಗಿದೆ. ಏನೇ ಆಗ್ಲಿ ಸಾರ್ವಜನಿಕರ ದುಡ್ಡಿನಲ್ಲಿ ಅಧ್ಯಯನದ ಹೆಸರಿನಲ್ಲಿ ಶಾಸಕರು ಈ ರೀತಿ ಮೋಜು ಮಸ್ತಿ ಮಾಡ್ತಿರೋದು ಆಕ್ರೋಶಕ್ಕೆ ಕಾರಣವಾಗಿದೆ.


TAG


Leave a Reply

Your email address will not be published. Required fields are marked *

error: Content is protected !!