ಕಾಂಗ್ರೆಸ್ ಕಾರ್ಯಾಕಾರಿ ಅಧ್ಯಕ್ಷರ ರೇಸ್ ನಲ್ಲಿ ನಾಲ್ವರು!

390

ನವದೆಹಲಿ: ಕಾಂಗ್ರೆಸ್ ಕಾರ್ಯಾಕಾರಿ ಅಧ್ಯಕ್ಷರು ಯಾರಾಗ್ತಾರೆ ಅನ್ನೋ ಪ್ರಶ್ನೆ ಇದೀಗ ಮೂಡಿದೆ. ಹೀಗಾಗಿ ನವದೆಹಲಿಯಲ್ಲಿರುವ 24 ಅಕ್ಬರ್ ರೋಡ್ ನಲ್ಲಿರುವ ಕಚೇರಿಯಲ್ಲಿ ಸಾಕಷ್ಟು ಚರ್ಚೆಗಳು ನಡೆಯುತ್ತಿವೆ. ರಾಹುಲ್ ಗಾಂಧಿ ಅಧ್ಯಕ್ಷ ಗಾದಿಯಿಂದ ಕೆಳಗೆ ಇಳಿದ ಮೇಲೆ ಕಾಂಗ್ರೆಸ್ ಕಾರ್ಯಕಾರಿ ಅಧ್ಯಕ್ಷರು ಯಾರು ಎನ್ನಲಾಗ್ತಿದ್ದು, ಅದರಲ್ಲಿ ನಾಲ್ಕು ಮಂದಿಯ ಹೆಸರು ಕೇಳಿ ಬರ್ತಿದೆ.

ಪ್ರಿಯಾಂಕಾ ಗಾಂಧಿ ವಾದ್ರಾ, ಸಚಿನ್ ಪೈಲೆಟ್, ಅಶೋಕ್ ಗೆಹ್ಲೋಟ್ ಹಾಗೂ ಜ್ಯೋತಿರಾದಿತ್ಯ ಶಿಂದೆ ಅವರ ಹೆಸರು ಕೇಳಿ ಬರ್ತಿದ್ದು, ಈ ನಾಲ್ವರಲ್ಲಿ ಯಾರು ಕಾಂಗ್ರೆಸ್ ವರ್ಕಿಂಗ್ ಪ್ರಸಿಡೆಂಟ್ ಆಗ್ತಾರೆ ಅನ್ನೋ ಕುತೂಹಲ ಮೂಡಿದೆ. ಇದರ ಅಧ್ಯಕ್ಷರಾದವರು, ಕಾಂಗ್ರೆಸ್ ಪ್ರತಿದಿನದ ಕಾರ್ಯಗಳ ಸಂಪೂರ್ಣ ಅಪ್ ಡೇಟ್ ನಲ್ಲಿರಬೇಕು. ಹೀಗಾಗಿ ಇದನ್ನ ಹಿರಿಯರಿಗೆ ನೀಡಲಾಗುತ್ತೆ. ಯುವ ಮುಖಗಳಿಗೆ ಮಣಿ ಹಾಕಲಾಗುತ್ತಾ ಅನ್ನೋ ಪ್ರಶ್ನೆ ಇದೆ.




Leave a Reply

Your email address will not be published. Required fields are marked *

error: Content is protected !!