ಎಲ್ಲೆಡೆ ಅನಧಿಕೃತ ಅಂಗಡಿಗಳ ತೆರವು.. ಸಿಂದಗಿಯಲ್ಲಿ ಮಾತ್ರ ಹೆಚ್ಚಳ..

415

ಪ್ರಜಾಸ್ತ್ರ ಸುದ್ದಿ

ವಿಜಯಪುರ: ರಾಜ್ಯದಲ್ಲಿ ಎಲ್ಲೆಡೆ ಅನಧಿಕೃತ ಅಂಗಡಿ, ಮನೆ, ಡಬ್ಬಾ ಅಂಗಡಿಗಳನ್ನು ತೆರವುಗೊಳಿಸಲಾಗುತ್ತಿದೆ. ನಗರಸಭೆ, ಪುರಸಭೆ, ಪಟ್ಟಣ ಪಂಚಾಯ್ತಿ ವ್ಯಾಪ್ತಿಯಲ್ಲಿನ ಅನಧಿಕೃತ ಅಂಗಡಿ, ಮನೆ ತೆರವು ಕೆಲಸ ನಡೆದಿದೆ. ಆದರೆ, ಜಿಲ್ಲೆಯ ಸಿಂದಗಿ ಪಟ್ಟಣದಲ್ಲಿ ಮಾತ್ರ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ.

ಪಟ್ಟಣದ ಪ್ರಮುಖ ರಸ್ತೆಗಳಲ್ಲಿ ಅನಧಿಕೃತ ಅಂಗಡಿಗಳ ಹಾವಳಿ ಜೋರಾಗಿದೆ. ಹೊಸದಾಗಿ ನಿರ್ಮಾಣವಾಗಿರುವ ರಸ್ತೆ, ಪುಟ್ ಪಾತ್ ನ್ನು ಸಹ ಬಿಟ್ಟಿಲ್ಲ. ಇದರಿಂದಾಗಿ ಸಾರ್ವಜನಿಕರು ಮತ್ತೆ ರೋಡ್ ಮಧ್ಯದಲ್ಲಿ ತಿರುಗಾಡುವ ಸ್ಥಿತಿ ನಿರ್ಮಾಣವಾಗಿದೆ. ಈ ಬಗ್ಗೆ ಕ್ರಮ ತೆಗೆದುಕೊಳ್ಳಬೇಕಾದ ಪುರಸಭೆ, ತಾಲೂಕು ಆಡಳಿತ ಸೇರಿದಂತೆ ಜನಪ್ರತಿನಿಧಿಗಳು ಸಹ ಮೌನಕ್ಕೆ ಶರಣಾಗಿರುವುದು ಹಲವು ಅನುಮಾನಗಳನ್ನು ಮೂಡಿಸಿದೆ.

ಪಟ್ಟಣವನ್ನು ಅಭಿವೃದ್ಧಿ ಮಾಡುತ್ತೇವೆ ಅಂತಾರೆ. ಆದರೆ, ಪಟ್ಟಣದ ಪ್ರಮುಖ ರಸ್ತೆಗಳನ್ನು ಒಂದು ಸುತ್ತು ನೋಡಿಕೊಂಡು ಬಂದರೆ ಅಲ್ಲಿನ ಪರಿಸ್ಥಿತಿ ಏನು ಅನ್ನೋದು ತಿಳಿಯುತ್ತೆ. ತಾಲೂಕಿನಲ್ಲಿ ಕೆಲಸ ಮಾಡುವ ಅಧಿಕಾರಿಗಳಿಗೂ ಹಾಗೂ ಸಮಾಜದ ಅಂಕು ಡೊಂಕು ತೋರಿಸುವ ಪತ್ರಕರ್ತರಿಗೂ ಭಯ ಮೂಡಿಸುವ ವಾತಾವರಣ ಇರುವುದು ಮಾತ್ರ ಸತ್ಯ. ಈ ಬಗ್ಗೆ ಪುರಸಭೆಯ ಹಿಂದಿನ ಅಧಿಕಾರಿಯೊಬ್ಬರೆ ಸ್ವತಃ ಹೇಳಿಕೊಂಡಿದ್ದಾರೆ. ಇದನ್ನು ಸೂಕ್ಷ್ಮವಾಗಿ ಗಮನಿಸಿದರೆ ಇದರ ಹಿಂದೆ ರಾಜಕೀಯ ಇರೋದು ಸತ್ಯ. ಇದು ಹೀಗೆ ಮುಂದುವರೆದರೆ ಮುಂದೆ ಸಿಂದಗಿ ಅನ್ನೋದು ಅನಧಿಕೃತ ಸೃಷ್ಟಿಕರ್ತರ ತಾಣವಾಗುವುದರಲ್ಲಿ ಯಾವುದೇ ಅನುಮಾನವಿಲ್ಲ.




Leave a Reply

Your email address will not be published. Required fields are marked *

error: Content is protected !!