ರಾಜ್ಯದಲ್ಲಿ ಒಂದು ಲಕ್ಷ ದಾಟಿದ ಸೋಂಕಿತರು

325

ಪ್ರಜಾಸ್ತ್ರ ಸುದ್ದಿ

ಬೆಂಗಳೂರು: ಇಂದಿನ ಕರೋನಾ ಹೆಲ್ತ್ ಬುಲೆಟಿನ್ ನಲ್ಲಿ 5,324 ಜನರಲ್ಲಿ ಸೋಂಕು ಕಾಣಿಸಿಕೊಂಡಿದೆ. ಈ ಮೂಲಕ ರಾಜ್ಯದಲ್ಲಿ ಬರೋಬ್ಬರಿ 10,1465 ಜನರಲ್ಲಿ ಸೋಂಕು ಕಾಣಿಸಿಕೊಂಡಿದೆ. ಇದರೊಂದಿಗೆ 1 ಲಕ್ಷ ದಾಟಿದ ಸೋಂಕಿತರ ಲಿಸ್ಟ್ ನಲ್ಲಿ ಕರ್ನಾಟಕವೂ ಸೇರಿಕೊಂಡಿತು.

ಇನ್ನು 75 ಜನ ಸಾವನ್ನಪ್ಪುವ ಮೂಲಕ 1953ಕ್ಕೆ ಏರಿಕೆಯಾಗಿದ್ದು, ಸಾವಿನ ಪ್ರಮಾಣ ಸಹ ಏರುತ್ತಲೇ ಇರುವುದು ಆತಂಕ ಮೂಡಿಸಿದೆ. 1,847 ಜನರು ಡಿಸ್ಚಾರ್ಜ್ ಆಗಿದ್ದು 37,685 ಜನ ಇದುವರೆಗೂ ಗುಣಮುಖರಾಗಿದ್ದಾರೆ. 61,819 ಪ್ರಕರಣಗಳು ಸಕ್ರಿಯವಾಗಿವೆ. ಜಿಲ್ಲಾವಾರು ಸೋಂಕಿತರ ವಿವರ ಹೀಗಿದೆ..

ಬೆಂ.ನ 1,470 ಬಳ್ಳಾರಿ 840, ಕಲಬುರಗಿ 631, ಮೈಸೂರು 296, ಉಡುಪಿ 225, ಧಾರವಾಡ 193, ಬೆಳಗಾವಿ 155, ಕೋಲಾರ 142, ಬೆಂ.ಗ್ರಾ 138, ರಾಯಚೂರು 120, ದಕ್ಷಿಣ ಕನ್ನಡ 119, ವಿಜಯಪುರ 110, ದಾವಣಗೆರೆ 110, ತುಮಕೂರು 89, ಶಿವಮೊಗ್ಗ 76, ಹಾಸನ 66, ಯಾದಗಿರಿ 64, ಗದಗ 63, ರಾಮನಗರ 62, ಮಂಡ್ಯ 56, ಚಿತ್ರದುರ್ಗ 51, ಬೀದರ 42, ಚಿಕ್ಕಬಳ್ಳಾಪುರ 40, ಉತ್ತರ ಕನ್ನಡ 38, ಕೊಪ್ಪಳ 28, ಬಾಗಲಕೋಟೆ 27, ಹಾವೇರಿ 27, ಚಿಕ್ಕಮಗಳುರು 26, ಚಾಮರಾಜನಗರ 16, ಕೊಡಗು 10 ಪ್ರಕರಣಗಳು ದೃಢಪಟ್ಟಿವೆ.




Leave a Reply

Your email address will not be published. Required fields are marked *

error: Content is protected !!