ತಾಯಿ, ಪತ್ನಿ ಕೊಲೆ: ಭಾರತದ ಮಾಜಿ ಕ್ರೀಡಾಪಟು ಅರೆಸ್ಟ್

351

ಪ್ರಜಾಸ್ತ್ರ ಅಂತಾರಾಷ್ಟ್ರೀಯ ಸುದ್ದಿ

ವಾಷಿಂಗ್ಟನ್: ಏಷಿಯನ್ ಚಾಂಪಿಯನ್ ಶಿಪ್ ನಲ್ಲಿ ಕಂಚಿನ ಪದಕ ಜಯಿಸಿದ ಭಾರತದ ಮಾಜಿ ಷಾಟ್ ಪುಟ್ ಆಟಗಾರ ಇಕ್ಬಾಲ್ ಸಿಂಗ್ ಬೋಪರಿಯಾ ಕೊಲೆ ಆರೋಪದಲ್ಲಿ ಬಂಧಿತನಾಗಿದ್ದಾನೆ. ಅಮೆರಿಕಾದಲ್ಲಿ ನೆಲೆಸಿರುವ 62 ವರ್ಷದ ಇಕ್ಬಾಲ್ ಸಿಂಗ್, ತಾಯಿ ಹಾಗೂ ಪತ್ನಿಯನ್ನ ಕೊಂದಿರುವ ಪ್ರಕರಣದಲ್ಲಿ ಬಂಧಿತನಾಗಿದ್ದಾನೆ.

ಮಕ್ಕಳಿಗೆ ಫೋನ್ ಮಾಡಿ ಕೊಲೆ ಮಾಡಿರುವ ವಿಷಯ ತಿಳಿಸಿದ್ದಾನೆ. ಅಲ್ದೇ, ಪೊಲೀಸರಿಗೂ ಈ ವಿಷಯ ತಿಳಿಸಿ ಎಂದಿದ್ದಾನೆ. ಕೂಡಲೇ ಮನೆಗೆ ಬಂದ ಮಕ್ಕಳಿಗೆ ಶಾಕ್ ಆಗಿದೆ. ರಕ್ತದ ಮುಡುವಿನಲ್ಲಿ ಬಿದ್ದಿದ್ದ ತಾಯಿ, ಅಜ್ಜಿಯನ್ನ ನೋಡಿ ಆಘಾತಕ್ಕೆ ಒಳಗಾಗಿದ್ದಾರೆ.

ಇಕ್ಬಾಲ್ ಸಿಂಗ್ ನನ್ನ ಬಂಧಿಸಿದ್ದು, ಕೊಲೆಗೆ ಕಾರಣ ಏನೆಂದು ತಿಳಿದು ಬಂದಿಲ್ಲ. ಇಕ್ಬಾಲ್ ಸಹ ಮೌನ ವಹಿಸಿದ್ದಾನೆ. ಮಕ್ಕಳಿಗೂ ತಂದೆಯ ಕೃತ್ಯವನ್ನ ಸಹಿಸಿಕೊಳ್ಳಲು ಆಗ್ತಿಲ್ಲ. ಪೊಲೀಸ್ ತನಿಖೆಯಿಂದ ಹತ್ಯೆಯ ಕಾರಣ ತಿಳಿದು ಬರಬೇಕಿದೆ.




Leave a Reply

Your email address will not be published. Required fields are marked *

error: Content is protected !!