ನಿನ್ನೆ ಬೆಳ್ಳಿ, ಇಂದು ಚಿನ್ನಕ್ಕೆ ಮುತ್ತಿಟ್ಟ ಪಾರುಲ್

265

ಪ್ರಜಾಸ್ತ್ರ ಕ್ರೀಡಾ ಸುದ್ದಿ

ಏಷ್ಯನ್ ಗೇಮ್ಸ್ 2023ರ ಟೂರ್ನಿಯಲ್ಲಿ 10ನೇ ದಿನವೂ ಭಾರತದ ಪದಕ ಬೇಟೆ ಮುಂದುವರೆದಿದೆ. 5 ಸಾವಿರ ಮೀಟರ್ ಓಟದ ಸ್ಪರ್ಧೆಯಲ್ಲಿ ಪಾರುಲ್ ಚೌಧರಿ ಚಿನ್ನದ ಪದಕ ಗೆಲ್ಲುವ ಮೂಲಕ ನೂತನ ಸಾಧನೆ ಮಾಡಿದ್ದಾರೆ.

ಸೋಮವಾರ ಸ್ಟೀಪರ್ ಚೇಸ್ ನಲ್ಲಿ ಬೆಳ್ಳಿ ಗೆದ್ದಿದ್ದ ಪಾರುಲ್ ಇಂದು ಚಿನ್ನ ಗೆಲ್ಲುವ ಮೂಲಕ ತ್ರಿವರ್ಣ ಧ್ವಜ ಹಾರಿಸಿದರು. ಆರಂಭದಿಂದಲೂ 3ನೇ ಸ್ಥಾನದಲ್ಲಿದ್ದ ಪಾರುಲ್ ಕೊನೆಯ ಕ್ಷಣದಲ್ಲಿ 2ನೇ ಸ್ಥಾನಕ್ಕೆ ಬಂದರು. ಇನ್ನೇನು 25 ಮೀಟರ್ ಇರುವಷ್ಟರಲ್ಲಿ ಜಪಾನಿನ ಓಟಗಾರ್ತಿಯನ್ನು ಹಿಂದಿಕ್ಕಿ ಪ್ರಥಮ ಸ್ಥಾನ ಪಡೆದರು.




Leave a Reply

Your email address will not be published. Required fields are marked *

error: Content is protected !!