ಆರ್ಚರಿಯಲ್ಲಿ ಬಂದವು ಎರಡು ಚಿನ್ನದ ಪದಕ

216

ಪ್ರಜಾಸ್ತ್ರ ಕ್ರೀಡಾ ಸುದ್ದಿ

ಏಷ್ಯನ್ ಗೇಮ್ಸ್ ಕ್ರೀಡಾಕೂಟದಲ್ಲಿ ಭಾರತ ಹೊಸ ದಾಖಲೆ ಬರೆದಿದೆ. ಜ್ಯೋತಿ ಸುರೇಖಾ ಹಾಗೂ ಓಜಸ್ ದೇವತಾಳೆ ಅವರು ಆರ್ಚರಿ ಮಿಶ್ರ ಕಾಂಪೌಂಡ್ ವಿಭಾಗದಲ್ಲಿ ಚಿನ್ನದ ಸಾಧನೆ ಮಾಡಿದ್ದಾರೆ.

ದಕ್ಷಿಣ ಕೋರಿಯಾ ಜೋಡಿಯನ್ನು159-158 ಅಂತರದಿಂದ ಸೋಲಿಸಿ ಗೆಲುವು ಸಾಧಿಸಿದೆ. ಇದರೊಂದಿಗೆ ಜ್ಯೋತಿ ಹಾಗೂ ಓಜಸ್ ಫೈನಲ್ ಗೆ ಎಂಟ್ರಿ ಪಡೆದಿದ್ದಾರೆ. ಈ ಕ್ರೀಡಾಕೂಟದಲ್ಲಿ 16ನೇ ಚಿನ್ನದ ಪದಕ ಇದಾಗಿದೆ. 2018ರಲ್ಲಿ ಏಷ್ಯನ್ ಗೇಮ್ಸ್ ನಲ್ಲಿ 70 ಪದಕಗಳ ಸಾಧನೆ ಇದುವರೆಗಿನ ರೆಕಾರ್ಡ್ ಆಗಿತ್ತು.

ಇಂದು 71 ಪದಕಗಳೊಂದಿಗೆ ಹಿಂದಿನ ರೆಕಾರ್ಡ್ ಮುರಿಯಲಾಗಿದೆ. ಇನ್ನು ಪದಕಗಳ ನಿರೀಕ್ಷೆಯಿದ್ದು, ಭಾರತದ ಕ್ರೀಡಾಪಟುಗಳು ಹೊಸ ಸಾಧನೆ ಬರೆಯಲು ಸಜ್ಜಾಗಿದೆ.




Leave a Reply

Your email address will not be published. Required fields are marked *

error: Content is protected !!