ಸ್ಕ್ವಾಷ್ ಮಿಶ್ರ ಡಬಲ್ಸ್, ಕಾಂಪೌಂಡ್ ಬಿಲ್ಲುಗಾರಿಕೆಯಲ್ಲೂ ಚಿನ್ನ

199

ಪ್ರಜಾಸ್ತ್ರ ಕ್ರೀಡಾ ಸುದ್ದಿ

ಚೀನಾದಲ್ಲಿ ನಡೆಯುತ್ತಿರುವ ಏಷ್ಯನ್ ಗೇಮ್ಸ್ ನಲ್ಲಿ ಭಾರತೀಯ ಕ್ರೀಡಾಪಟುಗಳು ಹಿಂದಿನ ಎಲ್ಲ ದಾಖಲೆಗಳನ್ನು ಮುರಿದು ಪದಕಗಳ ಭೇಟೆಯನ್ನು ಮುಂದುವರೆಸಿದ್ದಾರೆ. ಸ್ಕ್ವಾಷ್ ಮಿಶ್ರ ಡಬಲ್ಸ್ ನಲ್ಲಿ ದೀಪಿಕಾ ಪಳ್ಳಿಕಲ್, ಹರಿಂದರ್ ಜೋಡಿ ಚಿನ್ನದ ಪದಕ ಸಾಧನೆ ಮಾಡಿದೆ.

ಮಲೇಷ್ಯಾದ ಐಫಾ ಅಜ್ಮಾನ್, ಮೊಹಮ್ಮದ್ ಕಮಲ್ ವಿರುದ್ಧ ಫೈಟ್ ನಡೆಸಿದ ದೀಪಿಕಾ ಪಳ್ಳಿಕಲ್ ಹರಿಂದರ್ ಪಾಲ್ ಸಿಂಗ್ ಜಯ ಸಾಧಿಸುವ ಮೂಲಕ ಚಿನ್ನಕ್ಕೆ ಕೊರಳೊಡ್ಡಿದ್ದರು.

ಇನ್ನು ಕಾಂಪೌಂಡ್ ಬಿಲ್ಲುಗಾರಿಕೆಯಲ್ಲಿ ಭಾರತೀಯ ಪುರುಷರ ಪಡೆ ಅಮೋಘ ಸಾಧನೆ ಮಾಡಿತು. ಓಜಸ್ ಡಿಯೋಟಾಲೆ, ಅಭಿಷೇಕ್ ವರ್ಮಾ ಹಾಗೂ ಪ್ರಥಮೇಶ್ ಜಾವ್ಕರ್ ಟೀಂ ಚಿನ್ನದ ಪದಕ ಜಯಿಸಿತು.

ಕೊರಿಯಾದ ಜೇವಾನ್ ಯಾಂಗ್, ಜೇಹೊನಾ ಜೂ, ಜೊಂಘೋ ಕಿಮ್ ಸೋಲಿಸುವ ಮೂಲಕ ಬಂಗಾರದ ಪದಕ ಪಡೆದರು. ಇದರೊಂದಿಗೆ ಕ್ರೀಡಾಕೂಟದಲ್ಲಿ ಭಾರತ 21 ಚಿನ್ನದ ಪದಕ ಗೆದ್ದಿದೆ.




Leave a Reply

Your email address will not be published. Required fields are marked *

error: Content is protected !!