ಟೈಟ್ಯಾನಿಕ್, ಅವತಾರ್ ಸಿನ್ಮಾಗಿಂತ ಅತೀ ಹೆಚ್ಚು ಜನರು ನೋಡಿದ ಚಿತ್ರ ಯಾವುದು?

342

ಪ್ರಜಾಸ್ತ್ರ ಸಿನಿಮಾ ಡೆಸ್ಕ್

ವರ್ಲ್ಡ್ ಸಿನಿ ದುನಿಯಾದಲ್ಲಿ ಭರ್ಜರಿ ಸೌಂಡ್ ಮಾಡಿದ ಸಿನಿಮಾಗಳು ಅಂದ್ರೆ, ಟೈಟ್ಯಾನಿಕ್, ಅವತಾರ್, ಅವೆಂಜರ್ಸ್, ಸ್ಟಾರ್ ವಾರ್ಸ್ ಸಿರೀಸ್, ಜುರಾಸಿಕ್ ಪಾರ್ಕ್, ಹ್ಯಾರಿ ಪಾಟರ್, ಟರ್ಮಿನೇಟರ್ ಸೇರಿ ಕೆಲವೊಂದು ಸಿನಿಮಾಗಳು ಹಣ ಗಳಿಕೆಯಲ್ಲಿಯೂ ಮುಂದೆ ಇವೆ.

ಟೈಟ್ಯಾನಿಕ್, ಅವತಾರ್ ಸಿನಿಮಾಗಳು ಕಲೆಕ್ಷನ್ ವಿಚಾರದಲ್ಲಿ ಯಾರೂ ಮುಟ್ಟದ ಸ್ಥಾನದಲ್ಲಿ ಕುಳಿತಿವೆ. ಆದ್ರೆ, ಈ ಸಿನಿಮಾಗಳು ರಿಲೀಸ್ ಆದ ಟೈಂನಲ್ಲಿ ಟಿಕೆಟ್ ರೇಟ್ ಏರಿಕೆ ಕಂಡಿತ್ತು. ಹೀಗಾಗಿ ಗಳಿಕೆ ವಿಚಾರದಲ್ಲಿ ಟಾಪ್ ಇವೆ. ಆದ್ರೆ, ಅತೀ ಹೆಚ್ಚು ಜನರು ನೋಡಿದ ಸಿನಿಮಾ ವಿಚಾರದಲ್ಲಿ ಟಾಪ್ ನಲ್ಲಿ ಇಲ್ಲ.

1979ರಲ್ಲಿ ಬಂದ ಜೀಸಸ್ ಅನ್ನೋ ಮೂವಿ ಜಗತ್ತಿನಲ್ಲಿ ಅತೀ ಹೆಚ್ಚು ಜನರು ನೋಡಿದ ಸಿನ್ಮಾವಂತೆ. 2004ರಲ್ಲಿಯೇ ನ್ಯೂಯಾರ್ಕ್ ಟೈಮ್ಸ್ ಅಂದಾಜಿನ ಪ್ರಕಾರ ಬರೋಬ್ಬರಿ 300 ಕೋಟಿ ಜನರು ಜೀಸಸ್ ಸಿನಿಮಾ ನೋಡಿದ್ದಾರಂತೆ. ಈ ಚಿತ್ರ 1,600 ಭಾಷೆಗಳಿಗೆ ಭಾಷಾಂತರಗೊಂಡಿದೆ. ಇನ್ನು ಐಎಂಬಿಡಿ ಪ್ರಕಾರ ಥಿಯೇಟರ್, ಟಿವಿ, ಸಿಡಿ, ಡಿವಿಡಿ, ವಿಸಿಆರ್ ಸೇರಿ ಎಲ್ಲದರಲ್ಲೂ ನೋಡಿದ 10 ಟಾಪ್ ಸಿನಿಮಾಗಳ ಲಿಸ್ಟ್ ನಲ್ಲಿ ಭಾರತದ ಶೋಲೆ ಸಿನಿಮಾ ಸ್ಥಾನ ಪಡೆದಿದೆ. ಭಾರತೀಯ ಚಿತ್ರರಂಗದಲ್ಲಿ ಶೋಲೆ ಒಂದು ದಾಖಲೆಯೇ ಸರಿ.




Leave a Reply

Your email address will not be published. Required fields are marked *

error: Content is protected !!