ಹೊಸ ‘ಅವತಾರ’ ರೀ ಎಂಟ್ರಿ

240

ಪ್ರಜಾಸ್ತ್ರ ಸಿನಿಮಾ ಡೆಸ್ಕ್

ಜೇಮ್ಸ್ ಕ್ಯಾಮೆರಾನ್ ನಿರ್ದೇಶನದ ಅವತಾರ ಚಿತ್ರ ಬರೀ ಹಾಲಿವುಡ್ ಮಾತ್ರವಲ್ಲ ಇಡೀ ವಿಶ್ವದಲ್ಲೇ ದೊಡ್ಡ ಸಂಚಲನ ಸೃಷ್ಟಿಸಿತ್ತು. ಟೈಟಾನಿಕ್ ಬಳಿಕ ಅವತಾರ ಜಗತ್ತಿನ ಬಾಕ್ಸ್ ಆಫೀಸ್ ನ್ನೇ ಕೊಳ್ಳೆ ಹೊಡೆದಿತ್ತು. ಇದೀಗ ಹೊಸ ತಂತ್ರಜ್ಞಾನದೊಂದಿಗೆ ಸೆಪ್ಟೆಂಬರ್ 23ರಂದು ರೀ ರಿಲೀಸ್ ಮಾಡಲಾಗುತ್ತಿದೆ.

ಈ ಬಗ್ಗೆ ನಿರ್ದೇಶಕ ಜೇಮ್ಸ್ ಕ್ಯಾಮೆರಾನ್ ಟ್ವೀಟ್ ಮೂಲಕ ತಿಳಿಸಿದ್ದಾರೆ. 2009ರಲ್ಲಿ ಬಂದ ಅವತಾರ 13 ವರ್ಷಗಳ ಬಳಿಕ ಮರು ಬಿಡುಗಡೆಗೆ ಸಜ್ಜಾಗಿದೆ. ಈ ಚಿತ್ರ ಒಟ್ಟು ಐದು ಸರಣಿಯಲ್ಲಿ ಬರಲಿದೆ. ಈಗಾಗ್ಲೇ ಅವತಾರ: ದಿ ವೇ ಆಫ್ ವಾಟರ್ ಟೈಟಲ್ ಮೂಲಕ 2ನೇ ಭಾಗ ಸಿದ್ಧವಾಗಿದ್ದು, ಇದೇ ಡಿಸೆಂಬರ್ 16ರಂದು ರಿಲೀಸ್ ಸಹ ಆಗುತ್ತಿದೆ.

ಅದ್ಭುತ್ ಗ್ರಾಫಿಕ್ಸ್, ಸೌಂಡ್, ಎಡಿಟಿಂಗ್ ಮೂಲಕ ವೈಜ್ಞಾನಿಕ ಚಿತ್ರವೊಂದು ಹೊಸ ಲೋಕವನ್ನೇ ಸೃಷ್ಟಿಸಿತ್ತು. ಕಾನನದೊಳಗಿನ ಕೌತುಕದೊಂದಿಗೆ ಶುರುವಾಗುವ ಚಿತ್ರ ಅಕ್ಷರಶಃ ಹೊಸ ಜಗತ್ತು ಸೃಷ್ಟಿಸಿ ವಿಶ್ವ ಸಿನಿ ಪ್ರಿಯರ ಮನ ತಣಿಸಿತ್ತು. ಈ ಚಿತ್ರ 3 ಆಸ್ಕರ್ ಪ್ರಶಸ್ತಿಗಳೊಂದಿಗೆ ಹಲವು ಪ್ರಶಸ್ತಿಗಳನ್ನು ತನ್ನ ಮುಡಿಗೇರಿಸಿಕೊಂಡಿದೆ.




Leave a Reply

Your email address will not be published. Required fields are marked *

error: Content is protected !!