ಕರ್ನಾಟಕದಲ್ಲಿ ಲೈಗರ್ ಬಾಯ್ ಕಟ್ ಅಭಿಯಾನ

262

ಪ್ರಜಾಸ್ತ್ರ ಸಿನಿಮಾ ಡೆಸ್ಕ್

ಬಾಲಿವುಡ್ ಸಿನಿಮಾಗಳು ಬಾಯ್ ಕಟ್ ನಿಂದ ಬಳಲಿ ಬೆಂಡಾಗಿ ಹೋಗಿವೆ. ಆಮೀರ್ ಖಾನ್, ಅಕ್ಷಯ್ ಕುಮಾರ್, ರಣಬೀರ್ ಕಪೂರ್ ಅಂತಾ ದೊಡ್ಡ ದೊಡ್ಡ ಸ್ಟಾರ್ ಗಳ ಚಿತ್ರಗಳೇ ಮಕಾಡೆ ಮಲಗಿವೆ. ಈಗ ದಕ್ಷಿಣ ಭಾರತದ ಚಿತ್ರಕ್ಕೆ ಬಾಯ್ ಕಟ್ ಬಿಸಿ ಶುರುವಾಗಿದೆ.

ಪುರಿ ಜಗನ್ನಾಥ್ ನಿರ್ದೇಶನದ, ನಟ ವಿಜಯ್ ದೇವರಕೊಂಡ ನಟನೆಯ ಲೈಗರ್ ಚಿತ್ರಕ್ಕೆ ಕರ್ನಾಟಕದಲ್ಲಿ ಬಾಯ್ ಕಟ್ ಶುರುವಾಗಿದೆ. ಮೊದಲನೇಯದಾಗಿ ಲೈಗರ್ ಕನ್ನಡದಲ್ಲಿ ಡಬ್ ಆಗಿದ್ದರೂ ಕನ್ನಡ ಭಾಷೆಗಿಂತ ತೆಲುಗು, ತಮಿಳು ಭಾಷೆಯ ಚಿತ್ರಗಳು ಹೆಚ್ಚಿನ ಸಂಖ್ಯೆಯಲ್ಲಿ ರಿಲೀಸ್ ಆಗುತ್ತಿವೆ.

ಎರಡನೇಯದಾಗಿ ಕರಣ್ ಜೋಹರ್ ಸಿನಿಮಾ ನಿರ್ಮಾಣ ಮಾಡಿದ್ದಾರೆ. ಬಾಲಿವುಡ್ ನಟಿ ಅನನ್ಯಾ ಪಾಂಡೆ ನಟಿಸಿದ್ದಾರೆ. ಬಾಲಿವುಡ್ ಚಿತ್ರಗಳಿಗೆ ದೇಶ್ಯಾದ್ಯಂತ ಬಾಯ್ ಕಟ್ ಶುರುವಾಗುತ್ತಿದೆ. ಈ ಕಾರಣಕ್ಕೂ ಕರ್ನಾಟಕದಲ್ಲಿ ಲೈಗರ್ ಚಿತ್ರಕ್ಕೆ ವಿರೋಧ ವ್ಯಕ್ತವಾಗುತ್ತಿದೆ. ಆಗಸ್ಟ್ 25ಕ್ಕೆ ಚಿತ್ರ ರಿಲೀಸ್ ಆಗುತ್ತಿದ್ದು, ಚಿತ್ರ ತಂಡಕ್ಕೆ ಟೆನ್ಷನ್ ನೀಡಿದೆ.




Leave a Reply

Your email address will not be published. Required fields are marked *

error: Content is protected !!