ಮೋಟಾರ ವಾಹನ ಕಾಯ್ದೆ ತಿದ್ದುಪಡಿ: ಸೆ.1ರಿಂದ ಭಾರೀ ದಂಡ

707

ನವದೆಹಲಿ: ತಿದ್ದುಪಡಿಗೊಂಡಿರುವ ಮೋಟಾರ ವಾಹನ ಕಾಯ್ದೆ ಸೆಪ್ಟಂಬರ್ 1ರಿಂದ ಜಾರಿಗೆ ಬರ್ತಿದೆ. ಹೀಗಾಗಿ ಇನ್ಮುಂದೆ ಸಂಚಾರ ನಿಯಮ ಉಲ್ಲಂಘಿಸಿ ವಾಹನ ಓಡಿಸಿದ್ರೆ ಭಾರೀ ದಂಡ ಕಟ್ಟಬೇಕಾಗುತ್ತೆ.

ಲೈಸನ್ಸ್ ಇಲ್ಲದೆ ಸಿಕ್ಕಿಬೀಳುವ ವಾಹನ ಸವಾರರಿಗೆ 5 ಸಾವಿರ ದಂಡ ವಿಧಿಸಲಾಗುತ್ತೆ. ಈ ಹಿಂದೆ ಇದು 500 ರೂಪಾಯಿ ಇತ್ತು. ಕುಡಿದು ವಾಹನ ಚಲಾವಣೆ ಮಾಡಿ ಸಿಕ್ಕಿಬಿದ್ದರೆ 10 ಸಾವಿರ ರೂಪಾಯಿ ದಂಡ. ಈ ಹಿಂದೆ 2 ಸಾವಿರ ರೂಪಾಯಿ ಇತ್ತು.

ಕೆಲ ದಂಡಗಳ ವಿವರ

ಆ್ಯಂಬುಲೆನ್ಸ್ ನಂತಹ ತುರ್ತು ಸೇವಾ ವಾಹನಗಳಿಗೆ ದಾರಿ ಬಿಡದೆಯಿದ್ರೆ 10 ಸಾವಿರ, ಹೆಲ್ಮೆಟ್, ಸೀಟ್ ಬೆಲ್ಟ್, ಇಲ್ಲದೆ ಸಂಚಾರ ಮಾಡುವವರಿಗೆ 1 ಸಾವಿರ ರೂಪಾಯಿ ದಂಡ ವಿಧಿಸಲಾಗುತ್ತೆ. ಇಷ್ಟು ಮಾತ್ರವಲ್ಲದೆ ಪ್ರತಿ ವರ್ಷ ಸಂಚಾರ ನಿಮಯ ಉಲ್ಲಂಘನೆ ಮಾಡುವವರಿಗೆ ವಿಧಿಸುವ ದಂಡದಲ್ಲಿ ಶೇಕಡಾ 10ರಷ್ಟು ಏರಿಕೆ ಮಾಡಿಕೊಂಡು ಹೋಗಲು ತಿದ್ದುಪಡಿಯಲ್ಲಿ ಸೇರಿಸಲಾಗಿದೆ.




Leave a Reply

Your email address will not be published. Required fields are marked *

error: Content is protected !!