ಬೆಂಗಳೂರು: ಸಂಚಾರ ನಿಯಮ ಉಲ್ಲಂಘಿಸಿ ಭಾರೀ ದಂಡ ಕಟ್ಟಿ ಹೈರಾಣಾಗ್ತಿದ್ದ ಜನಕ್ಕೆ ಇಲ್ಲೊಂದು ಗುಡ್ ನ್ಯೂಸ್ ಇದೆ. ದುಬಾರಿ ದಂಡ ಪರಿಷ್ಕರಣೆ ಮಾಡಿ ಸರ್ಕಾರ ಆದೇಶ ಹೊರಡಿಸಿದೆ.
ಹೆಲ್ಮೆಟ್ ದಂಡ 1000 ರೂಪಾಯಿಂದ 500ಕ್ಕೆ ಬಂದಿದೆ. ಲೈಸನ್ಸ್ 5000 ರೂಪಾಯಿಯಿಂದ 1000ಕ್ಕೆ ಇಳಿಸಲಾಗಿದೆ. ಕಾರಿನ ಲೈಸನ್ಸ್ 2 ಸಾವಿರ. ವಿಮೆ ಇಲ್ಲದ್ದಿದ್ರೆ 2 ಸಾವಿರದಿಂದ 1 ಸಾವಿರ, ಸ್ಪೀಡ್ ಡ್ರೈವ್ ಸಹ 2 ಸಾವಿರದಿಂದ 1 ಸಾವಿರಕ್ಕೆ ಇಳಿಸಲಾಗಿದೆ. ಡ್ರಿಂಕ್ ಆ್ಯಂಡ್ ಡ್ರೈವ್ ದಂಡದಲ್ಲಿ ಯಾವುದೇ ಬದಲಾವಣೆ ಮಾಡಲಾಗಿಲ್ಲ. ಅದು 10 ಸಾವಿರ ರೂಪಾಯಿಯಲ್ಲಿಯೇ ಮುಂದುವರೆದಿದೆ.
ಭಾರೀ ಮೊತ್ತದ ದಂಡಕ್ಕೆ ರಾಜ್ಯದಲ್ಲಿ ಆಕ್ರೋಶ ವ್ಯಕ್ತವಾದ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ದಂಡ ಪರಿಷ್ಕರಣೆ ಮಾಡಿ ಆದೇಶ ಹೊರಡಿಸಿದೆ. ಹೀಗಾಗಿ ವಾಹನ ಸವಾರರು ಸ್ವಲ್ಪ ನೆಮ್ಮದಿಯ ನಿಟ್ಟುಸಿರು ಬಿಡುವಂತಾಗಿದೆ.