ನಾಳೆ ಕಮಲನಾಥಗೆ ಡೆಡ್ ಲೈನ್.. ಸರ್ಕಾರ ಉಳಿಯುತ್ತಾ? ಉರುಳುತ್ತಾ?

309

ಭೂಪಾಲ್: ಕಮಲನಾಥ ನೇತೃತ್ವದ ಕಾಂಗ್ರೆಸ್ ಸರ್ಕಾರಕ್ಕೆ ನಾಳೆ ವಿಶ್ವಾಸಮತ ಯಾಚಿಸಲು ಗರ್ವನರ್ ಲಾಲ್ಜಿ ಟಂಡನ್ ತಿಳಿಸಿದ್ದಾರೆ. ಮಾರ್ಚ್ 16ರಂದು ಬಹುಮತ ಸಾಬೀತು ಪ್ರಕ್ರಿಯೆ ನಡಿಸಬೇಕೆಂದು ವಿಧಾನಸಭೆ ಸ್ಪೀಕರ್ ನರ್ಮದಾ ಪ್ರಸಾದ ಪ್ರಜಾಪತಿಗೆ ತಿಳಿಸಿದ್ದಾರೆ.

ಸಂವಿಧಾನದ 174 ಮತ್ತು 175(2) ವಿಧಿ ಅನ್ವಯ ಮಾರ್ಚ್ 16, ಸೋಮವಾರ ಬೆಳಗ್ಗೆ 11 ಗಂಟೆಗೆ ಅಧಿವೇಶನ ಪ್ರಾರಂಭವಾಗಲಿದೆ. ಇದಾದ ಬಳಿಕ ವಿಶ್ವಾಸಮತ ಯಾಚನೆ ಪ್ರಕ್ರಿಯೆ ನಡೆಯಬೇಕೆಂದು ರಾಜ್ಯಪಾಲರು ತಿಳಿಸಿದ್ದಾರೆ. ಹೀಗಾಗಿ ರಾಜಸ್ಥಾನದ ಜೈಪುರದಲ್ಲಿರುವ ಕಾಂಗ್ರೆಸ್ ಶಾಸಕರು ಇಂದು ಭೂಪಾಲ್ ಗೆ ತೆರಳುತ್ತಿದ್ದಾರೆ.

ಕಾಂಗ್ರೆಸ್ ಶಾಸಕರಿಗೆ ವಿಪ್ ಜಾರಿ ಮಾಡಲಾಗಿದ್ದು, ಮಾರ್ಚ್ 16 ರಿಂದ ಏಪ್ರಿಲ್ 13ರ ತನಕ ನಡೆಯುವ ವಿಧಾನಸಭೆ ಅಧಿವೇಶನದಲ್ಲಿ ಹಾಜರಿರಬೇಕು. ವಿಶ್ವಾಸಮತ ಯಾಚನೆ ವೇಳೆ ಸರ್ಕಾರದ ಪರ ವೋಟ್ ಹಾಕಬೇಕು ಎಂದು ತಿಳಿಸಲಾಗಿದೆ.

ಜ್ಯೋತಿರಾಧಿತ್ಯ ಸಿಂಧಿಯಾ ಕಾಂಗ್ರೆಸ್ ಬಿಟ್ಟು ಬಿಜೆಪಿ ಸೇರ್ಪಡೆಯಾಗಿದ್ದಾರೆ. ಇವರ ಹಿಂದೆಯೇ 22 ಜನ ಕಾಂಗ್ರೆಸ್ ಶಾಸಕರು ರಾಜೀನಾಮೆ ಸಲ್ಲಿಸಿದ್ದಾರೆ. ಹೀಗಾಗಿ ಇದೀಗ ಕಮಲನಾಥ ನಾಯಕತ್ವದ ಸರ್ಕಾರಕ್ಕೆ ಸಂಕಷ್ಟ ಶುರುವಾಗಿದೆ. ನಾಳೆ ನಡೆಯುವ ಬಹುಮತ ಸಾಬೀತು ವೇಳೆ ಏನಾಗುತ್ತೆ ಅನ್ನೋ ಕುತೂಹಲವಿದೆ. 15 ತಿಂಗಳ ಸರ್ಕಾರ ಉಳಿಯುತ್ತಾ ಉರುಳುತ್ತಾ ಅನ್ನೋ ಟೆನ್ಷನ್ ಶುರುವಾಗಿದೆ.




Leave a Reply

Your email address will not be published. Required fields are marked *

error: Content is protected !!