ಚಿರಂಜೀವಿ ಚಿತ್ರದಿಂದ ಹೊರ ನಡೆದ ತ್ರಿಶಾ.. ನಿರ್ಮಾಪಕರ ಬಗ್ಗೆ ಹೇಳಿದ್ದೇನು?

397

2006ರಲ್ಲಿ ಎ.ಆರ್ ಮುರುಗದಾಸ ನಿರ್ದೇಶನದ ಸ್ಟಾಲಿನ್ ಚಿತ್ರದಲ್ಲಿ ತೆಲುಗು ಸೂಪರ್ ಸ್ಟಾರ್ ಚಿರಂಜೀವಿ ಹಾಗೂ ನಟಿ ತ್ರಿಶಾ ಫಸ್ಟ್ ಟೈಂ ಒಟ್ಟಿಗೆ ನಟಿಸಿದ್ರು. ಇದಾದ್ಮೇಲೆ ಇದೀಗ ಆಚಾರ್ಯ ಅನ್ನೋ ಚಿತ್ರದಲ್ಲಿ ಕಾಣಿಸಿಕೊಳ್ತಿದ್ರು. ಇದ್ರಿಂದ ಫ್ಯಾನ್ಸ್ ಖುಷಿಯಾಗಿದ್ರು. ಆದ್ರೆ, ಇದೀಗ ತ್ರಿಶಾ ಚಿತ್ರದಿಂದ ಹೊರ ನಡೆದಿದ್ದಾರೆ.

ಚಿತ್ರದ ಬಗ್ಗೆ ಕೆಲವು ವಿಚಾರಗಳು ಮೊದ್ಲೇ ಚರ್ಚೆ ಮಾಡಿದಕ್ಕಿಂತ ಇದೀಗ ಭಿನ್ನವಾಗಿವೆ. ನಿರ್ಮಾಪಕರೊಂದಿಗಿನ ಕ್ರಿಯೇಟಿವ್ ವ್ಯತ್ಯಾಸದ ಹಿನ್ನೆಲೆಯಲ್ಲಿ ನಾನು ಚಿತ್ರದಿಂದ ಹೊರ ನಡೆಯುತ್ತಿದ್ದೇನೆ. ಚಿರಂಜೀವಿ ಸರ್ ನಿಮ್ಮ ಚಿತ್ರಕ್ಕೆ ಒಳ್ಳೆಯದಾಗ್ಲಿ. ಹೊಸ ಯೋಜನೆಯೊಂದಿಗೆ ಆದಷ್ಟು ಬೇಗ ನಿಮ್ಮ ಮುಂದೆ ಬರುತ್ತೇನೆ ಎಂದು ಫ್ಯಾನ್ಸ್ ಗೆ ತಿಳಿಸಿದ್ದಾರೆ. ಹೀಗೆ ದಿಢೀರ್ ಎಂದು ನಟಿ ತ್ರಿಶಾ ಚಿತ್ರದಿಂದ ಎಕ್ಸಿಟ್ ಆಗಲು ನಿಜಕ್ಕೂ ಆಗಿದ್ದು ಏನು ಅನ್ನೋ ಪ್ರಶ್ನೆ ಮೂಡಿದೆ.




Leave a Reply

Your email address will not be published. Required fields are marked *

error: Content is protected !!