ಹೊಸ ಲುಕ್ ನಲ್ಲಿ ಮಹಿ

251

ಪ್ರಜಾಸ್ತ್ರ ಕ್ರೀಡಾಸುದ್ದಿ

ಟೀಂ ಇಂಡಿಯಾದ ಮಾಜಿ ಕ್ಯಾಪ್ಟನ್ ಎಂ.ಎಸ್ ಧೋನಿ ಕ್ರಿಕೆಟ್ ಅಂಗಳಕ್ಕೆ ಗುಡ್ ಬೈ ಹೇಳಿದ್ರೂ ಅವರ ಕ್ರೇಜ್ ಕಡಿಮೆಯಾಗಿಲ್ಲ. ಧೋನಿ ಅಭಿಮಾನಿಗಳು ಈಗ್ಲೂ ಸಹ ಮಹಿ ಅಂದ್ರೆ ಇಷ್ಟಪಡ್ತಾರೆ. ಸೋಷಿಯಲ್ ಮೀಡಿಯಾ ಮೂಲಕ ಧೋನಿ ಅಭಿಮಾನಿಗಳಿಗೆ ಖುಷಿ ಕೊಡುತ್ತಾರೆ.

ಮಹಿ ಸದಾ ಒಂದಲ್ಲ ಒಂದು ಕಾರಣಕ್ಕೆ ಸುದ್ದಿಯಾಗುತ್ತಾರೆ. ಅದರಲ್ಲೂ ಹೇರ್ ಸ್ಟೈಲ್ ವಿಚಾರ ಸಹ ಒಂದು. ಶುಕ್ರವಾರ ಹೊಸ ಹೇರ್ ಸ್ಟೈಲ್ ಲುಕ್ ಸೋಷಿಯಲ್ ಮೀಡಿಯಾದಲ್ಲಿ ಸದ್ದು ಮಾಡುತ್ತಿದೆ. ಹೇರ್ ಸ್ಟೈಲರ್ ಆಲಿಮ್ ಹಕೀಮ್ ಧೋನಿ ಫೋಟೋ ಹಂಚಿಕೊಂಡಿದ್ದಾರೆ.

ಕರೋನಾ ಕಾರಣಕ್ಕೆ ಅರ್ಧಕ್ಕೆ ನಿಂತಿರುವ ಐಪಿಎಲ್ ಶೀಘ್ರದಲ್ಲಿ ಶುರುವಾಗಲಿದೆ. ಯುಎಇನಲ್ಲಿ ಐಪಿಎಲ್ ಮುಂದುವರೆಯಲಿದೆ. ಸಿಎಸ್ಕೆ ಕ್ಯಾಪ್ಟನ್ ಧೋನಿ ಕಣಕ್ಕೆ ಇಳಿಯಲಿದ್ದಾರೆ.




Leave a Reply

Your email address will not be published. Required fields are marked *

error: Content is protected !!