ಆಮ್ ಆದ್ಮಿ ಆದ ‘ಮುಖ್ಯಮಂತ್ರಿ ಚಂದ್ರು’

288

ಪ್ರಜಾಸ್ತ್ರ ಸುದ್ದಿ

ಬೆಂಗಳೂರು: ಕಳೆದ ಮೇ 29ರಂದು ಕಾಂಗ್ರೆಸ್ ಪಕ್ಷಕ್ಕೆ ರಾಜೀನಾಮೆ ಸಲ್ಲಿಸಿದ್ದ ಹಿರಿಯ ನಟ ಮುಖ್ಯಮಂತ್ರಿ ಚಂದ್ರು, ಇಂದು ಆಪ್ ಪಕ್ಷವನ್ನು ಸೇರ್ಪಡೆಯಾಗಿದ್ದಾರೆ. ಈ ಬಗ್ಗೆ ಆಪ್ ತನ್ನ ಫೇಸ್ ಬುಕ್ ನಲ್ಲಿ ಕಾರ್ಯಕ್ರಮದ ವಿಡಿಯೋ ಹಂಚಿಕೊಂಡಿದೆ.

ವೈಯಕ್ತಿಕ ಕಾರಣಗಳಿಂದ ರಾಜೀನಾಮೆ ನೀಡುತ್ತಿದ್ದೇನೆ ಎಂದು ಮುಖ್ಯಮಂತ್ರಿ ಚಂದ್ರು, ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಅವರಿಗೆ ರಾಜೀನಾಮೆ ಪತ್ರ ಸಲ್ಲಿಸಿದ್ದರು. ಆದರೆ, ರಾಜೀನಾಮೆ ಹಿಂದಿನ ಕಾರಣ, ಪರಿಷತ್ ಗೆ ಟಿಕೆಟ್ ನೀಡಿಲ್ಲ ಅನ್ನೋದಾಗಿದೆ ಎಂದು ಹೇಳಲಾಗುತ್ತಿದೆ.




Leave a Reply

Your email address will not be published. Required fields are marked *

error: Content is protected !!